ADVERTISEMENT

ಭಾರತೀಯ ಸೇನೆಗೆ ರಾಷ್ಟ್ರಪತಿ, ಪ್ರಧಾನಿ ಶುಭಾಶಯ

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 12:31 IST
Last Updated 15 ಜನವರಿ 2018, 12:31 IST
ಸೇನಾ ದಿನಾಚರಣೆ ಪ್ರಯುಕ್ತ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ನೌಕಾಪಡೆಯ ಮುಖ್ಯಸ್ಥ ಸುನಿಲ್ ಲನ್‌ಬಾ ಮತ್ತು ಏರ್ ಚೀಫ್ ಮಾರ್ಷಲ್ ಬಿ.ಎಸ್. ಧನೊವಾ ಅಮರ್‌ ಜವಾನ್‌ ಜ್ಯೋತಿಗೆ ಗೌರವ ಸಲ್ಲಿಸಿದರು. (ಚಿತ್ರ ಕೃಪೆ – ಎಎನ್‌ಐ ಸುದ್ದಿ ಸಂಸ್ಥೆ)

ನವದೆಹಲಿ: ಭಾರತೀಯ ಸೇನೆ ಸೋಮವಾರ 70ನೇ ವರ್ಷದ ‘ಸೇನಾ ದಿನ’ ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತಿತರ ಗಣ್ಯರು ಶುಭಾಶಯ ಕೋರಿದ್ದಾರೆ.

ಭಾರತೀಯ ಸೇನೆಗೆ ಶುಭಾಶಯ ಕೋರಿ ಟ್ವೀಟ್ ಮಾಡಿರುವ ರಾಷ್ಟ್ರಪತಿಗಳು, ‘ಭಾರತೀಯ ಸೇನೆಯ ವೀರ ಯೋಧರು, ಮಾಜಿ ಸೈನಿಕರು ಹಾಗೂ ಅವರ ಕುಟುಂಬಗಳಿಗೆ ಸೇನಾ ದಿನದ ಅಭಿನಂದನೆಗಳು. ನಮ್ಮ ಸ್ವಾತಂತ್ರ್ಯದ ಕಾವಲುಗಾರರಾದ ನೀವು ಈ ದೇಶದ ಹೆಮ್ಮೆ. ನೀವು ಎಚ್ಚರದಿಂದಿದ್ದು ಗಡಿ ಕಾಯುತ್ತಿರುವುದರಿಂದಲೇ ನಾಗರಿಕರು ನೆಮ್ಮದಿಯಿಂದ ನಿದ್ದೆ ಮಾಡುತ್ತಿರುವುದು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT