ADVERTISEMENT

ಆಧಾರ್ ದೃಢೀಕರಣಕ್ಕೆ ಮುಖ ಗುರುತಿಸುವಿಕೆ ವಿಧಾನ!

ಏಜೆನ್ಸೀಸ್
Published 15 ಜನವರಿ 2018, 11:44 IST
Last Updated 15 ಜನವರಿ 2018, 11:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಆಧಾರ್ ಬಳಕೆದಾರರಿಗೆ ‘ಮುಖ ಗುರುತಿಸುವಿಕೆ’ ವಿಧಾನದ ಮೂಲಕವೂ ತಮ್ಮ ಗುರುತು ದೃಢಪಡಿಸಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಹೇಳಿದೆ.

ಈಗಾಗಲೇ ಜಾರಿಯಲ್ಲಿರುವ ಬಯೊಮೆಟ್ರಿಕ್‌ ದೃಢೀಕರಣ ವಿಧಾನಗಳ ಜತೆ (ಬೆರಳಚ್ಚು, ಕಣ್ಣಿನ ಪಾಪೆ ಸ್ಕ್ಯಾನ್‌ ಮಾಡುವುದು) ಹೆಚ್ಚುವರಿಯಾಗಿ ‘ಮುಖ ಗುರುತಿಸುವ’ ವಿಧಾನ ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಯುಐಡಿಎಐ ತಿಳಿಸಿದೆ.

2018ರ ಜುಲೈ 1ರಿಂದ ಹೊಸ ವಿಧಾನ ಜಾರಿಗೆ ಬರಲಿದೆ ಎಂದು ಯುಐಡಿಎಐ ತಿಳಿಸಿದೆ.

ADVERTISEMENT

‘ಮುಖ ಗುರುತಿಸುವಿಕೆ ವಿಧಾನವು ಎಲ್ಲ ನಾಗರಿಕರಿಗೆ ಗುರುತು ದೃಢೀಕರಣಕ್ಕಾಗಿ ಹೆಚ್ಚುವರಿ ಆಯ್ಕೆಯಾಗಲಿದೆ. ಆಧಾರ್‌ ಕಾರ್ಡ್‌ದಾರರು ಈಗಾಗಲೇ ಜಾರಿಯಲ್ಲಿರುವ ವಿಧಾನಗಳ ಪೈಕಿ ಒಂದರ ಮೂಲಕ ಗುರುತು ದೃಢಪಡಿಸಿಕೊಂಡ ನಂತರವೇ ಹೊಸ ವಿಧಾನದಲ್ಲಿ ದೃಢೀಕರಿಸಿಕೊಳ್ಳಲು ಅವಕಾಶ ನೀಡಲಾಗುವುದು’ ಎಂದು ಯುಐಡಿಎಐ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.