ADVERTISEMENT

ಟಿಕೆಟ್‌ ರಹಿತ ಪ್ರಯಾಣ: ರೈಲ್ವೆಯಿಂದ ₹ 121.09 ಕೋಟಿ ದಂಡ ವಸೂಲಿ

ಪಿಟಿಐ
Published 15 ಜನವರಿ 2018, 13:01 IST
Last Updated 15 ಜನವರಿ 2018, 13:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಟಿಕೆಟ್ ಇಲ್ಲದ ಹಾಗೂ ನಿರ್ದಿಷ್ಟ ದರ್ಜೆಯ ಟಿಕೆಟ್ ಪಡೆದು ಬೇರೆ ದರ್ಜೆಯಲ್ಲಿ ಬೋಗಿಯಲ್ಲಿ ಪ್ರಯಾಣಿಸುವವರಿಂದ ರೈಲ್ವೆಯು 2017ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ₹ 121.09 ಕೋಟಿ ದಂಡ ವಸೂಲಿ ಮಾಡಿದೆ.

‘ಇಷ್ಟೊಂದು ಪ್ರಮಾಣದ ದಂಡ ವಸೂಲಾಗಿರುವುದು ದಾಖಲೆ. ಲಗೇಜ್‌ಗೆ ಶುಲ್ಕ ಪಾವತಿಸದೇ ಇರುವುದಕ್ಕೆ ದಂಡ ವಿಧಿಸುವುದೂ ಇದರಲ್ಲಿ ಸೇರಿದೆ. 2016ರ ಇದೇ ಅವಧಿಯಲ್ಲಿ ₹ 100.53 ಕೋಟಿ ದಂಡ ಸಂಗ್ರಹಿಸಲಾಗಿತ್ತು’ ಎಂದು ಇಲಾಖೆ ತಿಳಿಸಿದೆ.

‘ಟಿಕೆಟ್ ರಹಿತ ಪ್ರಯಾಣ ನಿಯಂತ್ರಣಕ್ಕೆ ನಿರಂತರ ಪ್ರಯತ್ನ ನಡೆಸುತ್ತಿದ್ದೇವೆ. ದಂಡ ವಸೂಲಾತಿ ಕೂಡ ಈ ಅಭಿಯಾನ ಒಂದು ಭಾಗ. ಟಿಕೆಟ್ ವಿತರಣಾ ಯಂತ್ರ ಮತ್ತು ಮೊಬೈಲ್ ಫೋನ್‌ಗಳ ಮೂಲಕ ಟಿಕೆಟ್ ಖರೀದಿಸುವ ವ್ಯವಸ್ಥೆಯನ್ನೂ ಜಾರಿಗೆ ತರಲಾಗಿದೆ’ ಎಂದು ಕೇಂದ್ರ ರೈಲ್ವೆಯ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಶೈಲೇಂದ್ರ ಕುಮಾರ್ ತಿಳಿಸಿದ್ದಾರೆ.

ADVERTISEMENT

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.