ADVERTISEMENT

’ನಾನೊಬ್ಬ ಸಾಮಾನ್ಯ ಮನುಷ್ಯ’: ಪ್ರಧಾನಿ ಮೋದಿ

ಏಜೆನ್ಸೀಸ್
Published 20 ಜನವರಿ 2018, 8:30 IST
Last Updated 20 ಜನವರಿ 2018, 8:30 IST
’ನಾನೊಬ್ಬ ಸಾಮಾನ್ಯ ಮನುಷ್ಯ’: ಪ್ರಧಾನಿ ಮೋದಿ
’ನಾನೊಬ್ಬ ಸಾಮಾನ್ಯ ಮನುಷ್ಯ’: ಪ್ರಧಾನಿ ಮೋದಿ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನ ವಿವಿಧ ರಾಷ್ಟ್ರಗಳ ನಾಯಕರನ್ನು ಅಪ್ಪುವ ಚಿತ್ರಗಳನ್ನು #ಹಗ್‌ಫ್ಲೊಮಸಿ ಎಂಬ ಅಡಿಬರಹದಡಿಯಲ್ಲಿ ತಮಾಷೆ ವಿಡಿಯೊ ಮಾಡಿ ಪ್ರಕಟಿಸಿ ಕಾಂಗ್ರೆಸ್‌ ಪಕ್ಷ ಮಾಡಿರುವ ಲೇವಡಿಗೆ ಮೋದಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

‘ನಾನು ಇತರರಂತೆ ರಾಜತಾಂತ್ರಿಕ ನಿಯಮಗಳನ್ನು ಪಾಲಿಸಬಹುದಿತ್ತು. ಗಂಭೀರವಾಗಿ ಕೈ ಕುಲುಕಬಹುದಿತ್ತು. ಆದರೆ ನಾನು ಒಬ್ಬ ಸಾಮಾನ್ಯ ಮನುಷ್ಯ. ಇದು ನನ್ನ ಶಕ್ತಿ. ನನ್ನ ಈ ಮುಕ್ತ ಭಾವನೆಯನ್ನು ಹಲವು ರಾಷ್ಟ್ರನಾಯಕರು ಮೆಚ್ಚಿದ್ದಾರೆ. ಒಂದು ‘ಹಗ್’ ವಿಪತ್ತನ್ನು ಅವಕಾಶವಾಗಿ ಪರಿವರ್ತಿಸುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

’ಅಲ್ಲದೇ ನಮ್ಮ ದೇಶದಲ್ಲಿ ನಿಮಗೆ ಯಾವುದೇ ತೊಂದರೆ ಎದುರಾಗುವುದಿಲ್ಲ ಎಂಬ ಭರವಸೆಯನ್ನು ಅನ್ಯ ರಾಷ್ಟ್ರನಾಯಕರಲ್ಲಿ ಮೂಡಿಸಲಿದೆ. ಇದರಿಂದ ಉಭಯ ರಾಷ್ಟ್ರಗಳ ನಡುವಿನ ಸೌಹಾರ್ದ ಸಂಬಂಧಗಳು ಸುಲಭವಾಗಲಿದೆ’ ಎಂದು ಜೀ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ADVERTISEMENT

‘ಇಸ್ರೇಲ್‌ ಪ್ರಧಾನಿ ಬೆಂಜಾಮಿನ್‌ ನೆತನ್ಯಾಹು ಅವರು ಭಾರತಕ್ಕೆ ಭೇಟಿ ನೀಡಿದ್ದಾರೆ. ಪ್ರಧಾನಿ ಮೋದಿ ಅವರಿಂದ ನಾವು ಇನ್ನಷ್ಟು ಅಪ್ಪುಗೆಗಳನ್ನು ನಿರೀಕ್ಷಿಸುತ್ತೇವೆ! #ಹಗ್‌ಪ್ಲೊಮಸಿ’ ಎಂಬ ಅಡಿ ಬರಹದಲ್ಲಿ ಒಂದು ನಿಮಿಷ ನಾಲ್ಕು ಸೆಕೆಂಡ್‌ಗಳ ವಿಡಿಯೊವನ್ನು ಕಾಂಗ್ರೆಸ್‌  ಕೆಲವು ದಿನಗಳ ಹಿಂದೆ ಟ್ವೀಟ್‌ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.