ADVERTISEMENT

ಬಿಎಸ್‌ಎಫ್‌ನ ಹುತಾತ್ಮ ಯೋಧನ ಕುಟುಂಬಕ್ಕೆ ₹25 ಲಕ್ಷ ಪರಿಹಾರ: ಯೋಗಿ ಆದಿತ್ಯನಾಥ

ಏಜೆನ್ಸೀಸ್
Published 20 ಜನವರಿ 2018, 10:57 IST
Last Updated 20 ಜನವರಿ 2018, 10:57 IST
ಬಿಎಸ್‌ಎಫ್‌ನ ಹುತಾತ್ಮ ಯೋಧನ ಕುಟುಂಬಕ್ಕೆ ₹25 ಲಕ್ಷ ಪರಿಹಾರ: ಯೋಗಿ ಆದಿತ್ಯನಾಥ
ಬಿಎಸ್‌ಎಫ್‌ನ ಹುತಾತ್ಮ ಯೋಧನ ಕುಟುಂಬಕ್ಕೆ ₹25 ಲಕ್ಷ ಪರಿಹಾರ: ಯೋಗಿ ಆದಿತ್ಯನಾಥ   

ಲಖನೌ: ಪಾಕಿಸ್ತಾನದ ಸೇನಾಪಡೆ ಶುಕ್ರವಾರ ನಡೆಸಿದ್ದ ಶೆಲ್ ದಾಳಿ ವೇಳೆ ಹುತಾತ್ಮರಾದ ಯೋಧನ ಕುಟುಂಬಸ್ಥರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ₹25 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಹುತಾತ್ಮ ಯೋಧನ ಪತ್ನಿಗೆ ₹20 ಲಕ್ಷ ಹಾಗೂ ಪೋಷಕರಿಗೆ ₹5 ಲಕ್ಷ ಪರಿಹಾರ ಘೋಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಿಎಸ್‌ಎಫ್ ಹೆಡ್‌ಕಾನ್‌ಸ್ಟೇಬಲ್ ಜಗ್ಪಾಲ್ ಸಿಂಗ್ ಅವರು ಪಾಕಿಸ್ತಾನಿ ಪಡೆ ಶುಕ್ರವಾರ ಸಾಂಬ ವಲಯದಲ್ಲಿ ನಡೆಸಿದ್ದ ಶೆಲ್ ದಾಳಿ ವೇಳೆ ಹುತಾತ್ಮರಾಗಿದ್ದರು.

ADVERTISEMENT

ಬುಲದ್ಶಾ ಜಿಲ್ಲೆಯವರಾದ ಜಗ್ಪಾಲ್ ಸಿಂಗ್ ಅವರು 173ನೇ ಬೆಟಾಲಿಯನ್ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 1988ರಲ್ಲಿ ಬಿಎಸ್‌ಎಫ್‌ ಪಡೆಗೆ ಸೇರ್ಪಡೆಯಾಗಿದ್ದರು.

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.