ADVERTISEMENT

ಬಂಧಿತ ಮೂವರು ಪೊಲೀಸ್‌ ವಶಕ್ಕೆ

ಪಿಟಿಐ
Published 21 ಜನವರಿ 2018, 19:30 IST
Last Updated 21 ಜನವರಿ 2018, 19:30 IST

ಮುಂಬೈ: ಇಲ್ಲಿನ ಕಮಲಾ ಮಿಲ್‌ ಪ್ರದೇಶದಲ್ಲಿರುವ ‘1– ಅಬೌ’ ಪಬ್‌ನಲ್ಲಿ ನಡೆದ ಬೆಂಕಿ ದುರಂತಕ್ಕೆ ಸಂಬಂಧಿಸಿ ಶನಿವಾರ
ಬಂಧಿಸಿದ್ದ ಮೂವರನ್ನು ಜನವರಿ 25ರವರೆಗೆ ಪೊಲೀಸ್‌ ವಶಕ್ಕೆ ಒಪ್ಪಿಸಲಾಗಿದೆ.

ಕಮಲಾ ಮಿಲ್‌ ಪಾಲುದಾರ ರವಿ ಭಂಡಾರಿ, ಅಗ್ನಿಶಾಮಕ ಠಾಣೆ ಅಧಿಕಾರಿ ರಾಜೇಂದ್ರ ಪಾಟೀಲ, ನಿರ್ವಾಣ ಹುಕ್ಕಾ ಮಾಲೀಕ ಉತ್ಕರ್ಷ್‌ ಪಾಂಡೆ ಅವರನ್ನು ಎನ್‌.ಎಂ.ಜೋಶಿ ಮಾರ್ಗ ಪೊಲೀಸರು ಬಂಧಿಸಿ, ಭೋಜವಾಡಾ ನ್ಯಾಯಾಲಯದ ನ್ಯಾಯಾಧೀಶರ ಎದುರು ಭಾನುವಾರ ಮಧ್ಯಾಹ್ನ ಹಾಜರುಪಡಿಸಿದರು. ನ್ಯಾಯಾಲಯ ಬಂಧಿತರನ್ನು ಪೊಲೀಸ್‌ ವಶಕ್ಕೆ ನೀಡಿದೆ ಎಂದು ಹಿರಿಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಅಹಮ್ಮದ್‌ ಪಠಾಣ ತಿಳಿಸಿದ್ದಾರೆ.

ಹುಕ್ಕಾದಿಂದ ಸಿಡಿದ ಕಿಡಿಯಿಂದ ಬೆಂಕಿ ಹತ್ತಿಕೊಂಡಿದೆ. ಇದು ‘1– ಅಬೌ’ ಪಬ್‌ಗೆ ಆವರಿಸಿಕೊಂಡಿದ್ದರಿಂದ ಈ ದುರ್ಘಟನೆ ನಡೆದಿದೆ. ಕರ್ತವ್ಯಲೋಪ ಎಸಗಿರುವ ಕೆಲವು ಅಗ್ನಿಶಾಮಕ ಅಧಿಕಾರಿಗಳ ವಿರುದ್ಧವೂ ಇಲಾಖೆ ವಿಚಾರಣೆ ನಡೆಸುವಂತೆ ವರದಿಯಲ್ಲಿ
ಹೇಳಲಾಗಿದೆ.

ADVERTISEMENT

ಕಳೆದ ವರ್ಷದ ಡಿಸೆಂಬರ್‌ 29ರಂದು ಪಬ್‌ನಲ್ಲಿ ನಡೆದ ಈ ಬೆಂಕಿ ದುರಂತದಲ್ಲಿ 14 ಮಂದಿ ಸಾವನ್ನಪ್ಪಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.