ADVERTISEMENT

ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಸಾಹಸಮಯ ಪ್ರದರ್ಶನ ನೀಡಿದ 'ಸೀಮಾ ಭವಾನಿ'

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 9:48 IST
Last Updated 26 ಜನವರಿ 2018, 9:48 IST
ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಸಾಹಸಮಯ ಪ್ರದರ್ಶನ ನೀಡಿದ 'ಸೀಮಾ ಭವಾನಿ'
ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಸಾಹಸಮಯ ಪ್ರದರ್ಶನ ನೀಡಿದ 'ಸೀಮಾ ಭವಾನಿ'   

ನವದೆಹಲಿ: ನವದೆಹಲಿಯ ರಾಜ್‍ಪಥ್‍ನಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಸಾಂಸ್ಕೃತಿಕ ಮತ್ತು ಸೌಹಾರ್ದತೆ ಬಿಂಬಿಸುವ ಕಲಾಪ್ರದರ್ಶನಗಳೊಂದಿಗೆ ಬಿಎಸ್‍ಎಫ್‍ನ ಸೀಮಾ ಭವಾನಿ ತಂಡ ಪ್ರದರ್ಶಿಸಿದ ಸಾಹಸಮಯ ಪ್ರದರ್ಶನ ಪ್ರೇಕ್ಷಕರ ಕಣ್ಮನ ಸೆಳೆಯಿತು.

ಬಿಎಸ್ಎಫ್ ಮಹಿಳಾ ಬೈಕ್ ರೈಡರ್‍‍ಗಳ ತಂಡವಾದ ಸೀಮಾ ಭವಾನಿ ಇದೇ ಮೊದಲ ಬಾರಿ ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಸಾಹಸ ಪ್ರದರ್ಶನ ನೀಡಿದೆ.

ಲಡಾಕ್ ಮೂಲದ ಸಬ್ ಇನ್‌ಸ್ಪೆಕ್ಟರ್‌ ಸ್ಟಾನ್‍ಜಿನ್ ನರ್ಯಾಂಗ್  ನೇತೃತ್ವದ ಸೀಮಾ ಭವಾನಿ ತಂಡದ ಮೈ ನವಿರೇಳಿಸುವ ಸಾಹಸ ಪ್ರದರ್ಶನಗಳನ್ನು ನೋಡಿ ಜನ ನಿಬ್ಬೆರಗಾದರು.

ADVERTISEMENT

ಸೇನಾಪಡೆಯ ವಿವಿಧ ದರ್ಜೆಯಲ್ಲಿರುವ  113 ಮಹಿಳಾ ಸೈನಿಕರು ಈ ತಂಡದಲ್ಲಿದ್ದಾರೆ. 25ರಿಂದ 30 ವರ್ಷ ಹರೆಯದ ಈ ತಂಡದಲ್ಲಿ 20 ಮಂದಿ ಪಂಜಾಬ್ ಮೂಲದವರಾಗಿದ್ದಾರೆ. ಇನ್ನುಳಿದಂತೆ ಪಶ್ಚಿಮ ಬಂಗಾಳ (15), ಮಧ್ಯ ಪ್ರದೇಶ (10), ಮಹಾರಾಷ್ಟ್ರ (9) ಮತ್ತು ಉತ್ತರ ಪ್ರದೇಶದ 8 ಮಂದಿ ಇದ್ದಾರೆ. ಕೇರಳ, ಕರ್ನಾಟಕ, ಉತ್ತರಾಖಂಡ ಮತ್ತು ದೆಹಲಿಯಿಂದ ತಲಾ ಇಬ್ಬರು ಮತ್ತು ಹಿಮಾಚಲ ಪ್ರದೇಶ, ಮೇಘಾಲಯದಿಂದ ತಲಾ ಒಬ್ಬರು ಈ ತಂಡದಲ್ಲಿದ್ದಾರೆ.

(ಡಿಡಿ ನ್ಯಾಷನಲ್ ವಾಹಿನಿಯಿಂದ ಸೆರೆ ಹಿಡಿದ ಚಿತ್ರ)

ಈ ತಂಡದಲ್ಲಿದ್ದವರಲ್ಲಿ ಹೆಚ್ಚಿನವರಿಗೆ ಬೈಕ್ ಚಾಲನೆ ಬರುತ್ತಿರಲಿಲ್ಲ ಆದರೆ ಬಿಎಸ್‍ಎಫ್‍ನ ವಿಶೇಷ ತರಬೇತುದಾರರಿಂದ ನಿರಂತರ ತರಬೇತಿ ಪಡೆದು ಇಲ್ಲಿ ಪ್ರದರ್ಶನ ನೀಡಿದ್ದಾರೆ.

ಪೆರೇಡ್‍ನಲ್ಲಿ ಕಂಡ ಸಾಹಸಮಯ ದೃಶ್ಯಗಳು ಇಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.