ADVERTISEMENT

ಶೇ. 7.2–7.5 ಅಭಿವೃದ್ಧಿ: ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಭಾರತ – ಅರುಣ್‌ ಜೇಟ್ಲಿ

ಏಜೆನ್ಸೀಸ್
Published 1 ಫೆಬ್ರುವರಿ 2018, 13:33 IST
Last Updated 1 ಫೆಬ್ರುವರಿ 2018, 13:33 IST
ಶೇ. 7.2–7.5 ಅಭಿವೃದ್ಧಿ: ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಭಾರತ – ಅರುಣ್‌ ಜೇಟ್ಲಿ
ಶೇ. 7.2–7.5 ಅಭಿವೃದ್ಧಿ: ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಭಾರತ – ಅರುಣ್‌ ಜೇಟ್ಲಿ   

ನವದೆಹಲಿ: 2018–19ನೇ ಸಾಲಿನ ಆರ್ಥಿಕ ವರ್ಷದ ಎರಡನೇ ಅವಧಿ ವೇಳೆಗೆ ಭಾರತ ಶೇ. 7.2–7.5 ರಷ್ಟು ಅಭಿವೃದ್ಧಿ ಸಾಧಿಸಲಿದ್ದು, ಬೃಹತ್‌ ಆರ್ಥಿಕತೆ ಹೊಂದಿರುವ ವಿಶ್ವದ ಐದನೇ ರಾಷ್ಟ್ರವಾಗಿ ಹೊರಹೊಮ್ಮುವ ನಿರೀಕ್ಷೆಯಿದೆ ಎಂದು ವಿತ್ತ ಸಚಿವ ಅರುಣ್‌ ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2018 ರ ಕೇಂದ್ರ ಬಜೆಟ್‌ ಮಂಡನೆ ವೇಳೆ ಜೇಟ್ಲಿ ಅವರು, ‘ಈಗಿನ ಸರ್ಕಾರದ ಮೊದಲ ಮೂರು ವರ್ಷಗಳ ಅವಧಿಯಲ್ಲಿ ದೇಶ ಶೇ.7.5 ರಷ್ಟು ಸರಾಸರಿ ಅಭಿವೃದ್ಧಿ ದರವನ್ನು ಹೊಂದಿದ್ದು, ಆರ್ಥಿಕತೆ ₹162.5 ಲಕ್ಷ ಕೋಟಿ ತಲುಪಿದೆ’ ಎಂದು ತಿಳಿಸಿದ್ದಾರೆ.

ಭಾರತ ಈಗಾಗಲೇ ವಿಶ್ವದ 7ನೇ ದೊಡ್ಡ ಆರ್ಥಿಕತೆಯಾಗಿದೆ. ಶೀಘ್ರದಲ್ಲೇ 5ನೇ ಸ್ಥಾನ ತಲುಪುವ ವಿಶ್ವಾಸವಿದೆ ಎಂದರು.

ADVERTISEMENT

2017–18ನೇ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಶೇ. 5.7 ರಷ್ಟಕ್ಕೆ ಕುಸಿದಿತ್ತು. ಇದು ಕಳೆದ ಮೂರು ವರ್ಷಗಳಲ್ಲೇ ಅತ್ಯಂತ ಕಡಿಮೆ ಮಟ್ಟವಾಗಿತ್ತು. ಸದ್ಯ ಶೇ. 6.3 ಕ್ಕೆ ತಲುಪಿದ್ದು, ಅಭಿವೃದ್ಧಿಯಲ್ಲಿ ಸುಧಾರಣೆ ಕಂಡು ಬಂದಿದೆ. ಕೇಂದ್ರ ಅಂಕಿ ಅಂಶ ಇಲಾಖೆಯ ಅಂದಾಜಿನಂತೆ ಈ ಸಾಲಿನ ಆರ್ಥಿಕ ವರ್ಷ ಮುಕ್ತಾಯದ (ಮಾರ್ಚ್‌ 31) ವೇಳೆಗೆ ಭಾರತ ಶೇ.6.5 ಪ್ರಗತಿ ಸಾಧಿಸಲಿದೆ.

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.