ADVERTISEMENT

ಮೊಬೈಲ್, ಟಿವಿ ದುಬಾರಿ: ತರಕಾರಿಗೂ ತಟ್ಟಲಿದೆ ಸುಂಕದ ಬಿಸಿ

ಪಿಟಿಐ
Published 1 ಫೆಬ್ರುವರಿ 2018, 13:25 IST
Last Updated 1 ಫೆಬ್ರುವರಿ 2018, 13:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮೊಬೈಲ್‌ ಫೋನ್‌, ಕಾರು, ಬೈಕ್ ಮತ್ತಿತರ ಆಮದಾಗುವ ವಸ್ತುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಬಜೆಟ್‌ನಲ್ಲಿ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಈ ವಸ್ತುಗಳು ದುಬಾರಿಯಾಗಲಿವೆ.

ಮೊಬೈಲ್‌ ಫೋನ್ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ 15ರಿಂದ 20ಕ್ಕೆ ಏರಿಕೆ ಮಾಡಲಾಗಿದೆ.

ಕಚ್ಚಾ ಗೋಡಂಬಿ, ಸೌರ ಫಲಕ ತಯಾರಿಯಲ್ಲಿ ಬಳಸುವ ಗಾಜು, ಶ್ರವಣ ಸಾಧನಗಳ ತಯಾರಿಯಲ್ಲಿ ಬಳಸುವ ಕಚ್ಚಾ ವಸ್ತುಗಳ ಮೇಲಿನ ಸುಂಕವನ್ನು ಕಡಿಮೆ ಮಾಡಲಾಗಿದೆ. ಹೀಗಾಗಿ ಈ ವಸ್ತುಗಳ ದರ ಇಳಿಕೆಯಾಗಲಿದೆ.

ADVERTISEMENT

ಯಾವುದು ದುಬಾರಿ?
ಮೊಬೈಲ್‌ ಫೋನ್, ಟಿ.ವಿ, ವಾಚ್, ಪಾದರಕ್ಷೆ, ಕಾರು, ಬೈಕ್‌, ಚಿನ್ನ, ಬೆಳ್ಳಿ, ತರಕಾರಿ, ಹಣ್ಣಿನ ಜ್ಯೂಸ್, ಸಿಗರೆಟ್, ಸನ್‌ಗ್ಲಾಸ್‌, ಪರ್‌ಫ್ಯೂಮ್‌, ಶೇವಿಂಗ್ ಕಿಟ್, ಸೌಂದರ್ಯ ವರ್ಧಕ ಸಾಧನಗಳು, ಟ್ರಕ್‌, ಬಸ್‌ನ ಚಕ್ರಗಳು, ಕ್ರೀಡಾ ಸಾಮಗ್ರಿಗಳು, ಖಾದ್ಯ ತೈಲ, ಆಟಿಕೆ, ಬೊಂಬೆಗಳು, ವಜ್ರ, ಅಲಂಕಾರಿಕ ಆಭರಣಗಳು, ಸನ್‌ಸ್ಕ್ರೀನ್, ಡಿಯೊಡ್ರಂಟ್, ರೇಷ್ಮೆ ಬಟ್ಟೆ

ಯಾವುದು ಅಗ್ಗ?
ಕಚ್ಚಾ ಗೋಡಂಬಿ, ಸೌರ ಫಲಕ ತಯಾರಿಸಲು ಬಳಸುವ ಗಾಜು, ಶ್ರವಣ ಸಾಧನ ತಯಾರಿಗೆ ಬಳಸುವ ಕಚ್ಚಾ ವಸ್ತುಗಳು, ದುರಸ್ತಿ ಕೆಲಸಗಳಲ್ಲಿ ಉಪಯೋಗಿಸುವ ಎಲೆಕ್ಟ್ರಾನಿಕ್ ವಸ್ತುಗಳು, ಬಂಡವಾಳ ಸರಕುಗಳು

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.