ADVERTISEMENT

ಉತ್ತರ ಪ್ರದೇಶ: 48 ಗಂಟೆಗಳಲ್ಲಿ 15 ಎನ್‌ಕೌಂಟರ್‌, 24 ಮಂದಿ ಬಂಧನ

ಪಿಟಿಐ
Published 3 ಫೆಬ್ರುವರಿ 2018, 19:30 IST
Last Updated 3 ಫೆಬ್ರುವರಿ 2018, 19:30 IST

ಲಖನೌ: ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ 24 ಗಂಟೆಗಳ ಅವಧಿಯಲ್ಲಿ ಪೊಲೀಸರು 15 ಎನ್‌ಕೌಂಟರ್ ನಡೆಸಿದ್ದು, ಗ್ಯಾಂಗ್‌ಸ್ಟರ್‌ ಒಬ್ಬ ಬಲಿಯಾದ್ದಾನೆ. ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ 24 ಮಂದಿಯನ್ನು ಬಂಧಿಸಲಾಗಿದೆ.

‘ನಗ್ಲಾಖೇಪಡ್‌ ಅರಣ್ಯ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಗ್ಯಾಂಗ್‌ಸ್ಟರ್‌ ಇಂದರ್‌ಪಾಲ್‌ ಮೃತಪಟ್ಟಿದ್ದಾನೆ. ಆತನ ತಲೆಗೆ ₹25,000 ಬಹುಮಾನ ಘೋಷಿಸಲಾಗಿತ್ತು.  ಕೊಲೆ, ದರೋಡೆ ಸೇರಿದಂತೆ 30ಕ್ಕಿಂತಲೂ ಹೆಚ್ಚು ಪ್ರಕರಣಗಳು ಆತನ ವಿರುದ್ಧ ದಾಖಲಾಗಿದ್ದವು’ ಎಂದು ಪೊಲೀಸರು ವರಿಷ್ಠಾಧಿಕಾರಿ ರಾಜೀವ್‌ ನಾರಾಯಣ್‌ ಸಿಂಗ್‌ ಹೇಳಿದ್ದಾರೆ.

ಬುಲಂದ್‌ಶಹರ್‌, ಶಾಮ್ಲಿ, ಕಾನ್ಪುರ, ಸಹರಾನ್‌ಪುರ, ಲಖನೌ, ಭಾಗ್‌ಪತ್‌, ಮುಜಾಫರ್‌ನಗರ, ಗೋರಖ್‌ಪುರ, ಹಪುರ್‌ ಮತ್ತು ಮೀರಠ್‌ನಲ್ಲಿ ಎನ್‌ಕೌಂಟರ್‌ ನಡೆದಿದೆ.

ADVERTISEMENT

ಶುಕ್ರವಾರ ಗೋರಖ್‌ಪುರದಲ್ಲಿ ಗ್ರಾಮ ಮುಖಂಡರೊಬ್ಬರಿಗೆ ಬೆದರಿಕೆ ಹಾಕಿದ ಪ್ರಕರಣದ ಆರೋಪಿಗಳ ಜೊತೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಆರೋಪಿಗಳು ಹಾಗೂ ಹಲವು ಮಂದಿ ಪೊಲೀಸರು ಗಾಯಗೊಂಡಿದ್ದರು.

ಉತ್ತರ ಪ್ರದೇಶದಲ್ಲಿ ಡಿಜಿಪಿ ಒ.ಪಿ.ಸಿಂಗ್‌ ಅವರು ಕಳೆದ ತಿಂಗಳು ಅಧಿಕಾರ ಸ್ವೀಕರಿಸಿದ ಬಳಿಕ ವಿವಿಧ ಪ್ರಕರಣಗಳ ಆರೋಪಿಗಳ ವಿರುದ್ಧದ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.