ADVERTISEMENT

ಲೈಂಗಿಕ ದೌರ್ಜನ್ಯ: ಸ್ಟಾರ್ಟ್‌ಅಪ್‌ ಗುರು ಬಂಧನ

ಪಿಟಿಐ
Published 9 ಫೆಬ್ರುವರಿ 2018, 19:59 IST
Last Updated 9 ಫೆಬ್ರುವರಿ 2018, 19:59 IST
ಮಹೇಶ್ ಮೂರ್ತಿ
ಮಹೇಶ್ ಮೂರ್ತಿ   

ಮುಂಬೈ: ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಏಂಜೆಲ್ ಇನ್ವೆಸ್ಟರ್ (ಸ್ಟಾರ್ಟ್‌ಅಪ್‌ಗಳಲ್ಲಿ ಹಣ ಹೂಡಿಕೆ ಮಾಡುವವರು) ಮಹೇಶ್ ಮೂರ್ತಿ (52) ಅವರನ್ನು ಶುಕ್ರವಾರ ಬಂಧಿಸಲಾಗಿದೆ.

ದೆಹಲಿಯ  32 ವರ್ಷದ ಮಹಿಳಾ ಉದ್ಯಮಿಯೊಬ್ಬರು ನೀಡಿದ ದೂರು ಆಧರಿಸಿ, ಡಿಸೆಂಬರ್ 29ರಂದು ಅವರ ವಿರುದ್ಧ ಭಾರತೀಯ ದಂಡಸಂಹಿತೆಯ 354 (ಡಿ) (ದೌರ್ಜನ್ಯ), 509 (ಮಹಿಳೆಯ ಗೌರವಕ್ಕೆ ದಕ್ಕೆ ತರುವ ಮಾತು ಅಥವಾ ಸಂಜ್ಞೆ) ಹಾಗೂ ಮಾಹಿತಿ ತಂತ್ರಜ್ಞಾನದ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT