ADVERTISEMENT

ವಾಗ್ವಾದ: ದಲಿತ ವಿದ್ಯಾರ್ಥಿ ಹತ್ಯೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2018, 19:30 IST
Last Updated 11 ಫೆಬ್ರುವರಿ 2018, 19:30 IST

ಲಖನೌ: ಅಲಹಾಬಾದ್‌ನಲ್ಲಿ ಭಾನುವಾರ ಎರಡು ಗುಂಪುಗಳ ನಡುವೆ ನಡೆದ ವಾಗ್ವಾದದಿಂದಾಗಿ ದಲಿತ ವಿದ್ಯಾರ್ಥಿಯೊಬ್ಬನನ್ನು ಹತ್ಯೆಗೈಯ್ಯಲಾಗಿದೆ.

ಅಲಹಾಬಾದ್‌ ವಿಶ್ವವಿದ್ಯಾಲಯದ ಕಾನೂನು ವಿಷಯದ ವಿದ್ಯಾರ್ಥಿ ದಿಲೀಪ್ ಕುಮಾರ್ ಸರೋಜ್‌ ಹತ್ಯೆಯಾದ ವಿದ್ಯಾರ್ಥಿ.

‘ಸರೋಜ್‌ ಮತ್ತು ಅವರ ಗೆಳೆಯರು ರೆಸ್ಟೊರೆಂಟ್‌ಗೆ ಹೋಗಿದ್ದರು. ಅಲ್ಲಿ ಇನ್ನೊಂದು ಗುಂಪಿನೊಂದಿಗೆ ನಡೆದ ವಾಗ್ವಾದದ ನಂತರ ರೆಸ್ಟೊರೆಂಟ್‌ನ ಹೊರಗೆ ಸರೋಜ್‌ನನ್ನು ಬೆಲ್ಟ್‌, ಕೋಲು ಮತ್ತು ಇಟ್ಟಿಗೆಗಳಿಂದ ಥಳಿಸಲಾಗಿದೆ. ಇದರಿಂದ ಅವರ ಮುಖ, ಕುತ್ತಿಗೆ ಮತ್ತು ಎದೆ ಭಾಗಕ್ಕೆ ತೀವ್ರಗಾಯಗಳಾಗಿದ್ದವು. ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ರೆಸ್ಟೊರೆಂಟ್‌ನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ, ದಾಳಿ ನಡೆಸಿದವರಲ್ಲಿ ಒಬ್ಬನನ್ನು ಬಂಧಿಸಲಾಗಿದ್ದು, ಇನ್ನುಳಿದವರನ್ನು ಪತ್ತೆ ಹಚ್ಚುವ
ಕಾರ್ಯ ನಡೆದಿದೆ. ರೆಸ್ಟೊರೆಂಟ್‌ನ ಮಾಲೀಕ ಅಮಿತ್ ಉಪಾಧ್ಯಾಯ ಅವರನ್ನೂ ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.