ADVERTISEMENT

ಗಡಿಪ್ರದೇಶದಲ್ಲಿ ರಕ್ತದೋಕುಳಿ ನಿಲ್ಲಿಸಲು ‘ಮಾತುಕತೆ’ಯೇ ಹಾದಿ: ಮೆಹಬೂಬ ಮುಫ್ತಿ

ಏಜೆನ್ಸೀಸ್
Published 12 ಫೆಬ್ರುವರಿ 2018, 12:45 IST
Last Updated 12 ಫೆಬ್ರುವರಿ 2018, 12:45 IST
ಗಡಿಪ್ರದೇಶದಲ್ಲಿ ರಕ್ತದೋಕುಳಿ ನಿಲ್ಲಿಸಲು ‘ಮಾತುಕತೆ’ಯೇ ಹಾದಿ: ಮೆಹಬೂಬ ಮುಫ್ತಿ
ಗಡಿಪ್ರದೇಶದಲ್ಲಿ ರಕ್ತದೋಕುಳಿ ನಿಲ್ಲಿಸಲು ‘ಮಾತುಕತೆ’ಯೇ ಹಾದಿ: ಮೆಹಬೂಬ ಮುಫ್ತಿ   

ಶ್ರೀನಗರ: ಜಮ್ಮು ಕಾಶ್ಮೀರ ಜನತೆ ಇನ್ನೂ ಎಷ್ಟು ವರ್ಷಗಳ ಕಾಲ ತ್ಯಾಗಕ್ಕೆ ಸಿದ್ಧರಾಗಿರಬೇಕು? ಭಾರತ ಮತ್ತು ಪಾಕಿಸ್ತಾನ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕಿದೆ. ರಾಜ್ಯದಲ್ಲಿನ ಹಿಂಸಾಚಾರಕ್ಕೆ ತೆರೆ ಎಳೆಯಬೇಕಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಸದನದಲ್ಲಿ ಹೇಳಿದರು. 

ರಾಜ್ಯಸಭೆಯಲ್ಲಿ ರಾಜ್ಯದ ವಿಷಮ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಮುಫ್ತಿ, ಜಮ್ಮು ಕಾಶ್ಮೀರದ ಜನತೆ ಹಿಂಸಾಚಾರದ ಹೊಡೆತವನ್ನು ಇನ್ನು ಎಷ್ಟು ದಿನ ಸಹಿಸಿಕೊಳ್ಳಬೇಕು? ಫಾರೂಕ್ ಅಬ್ದುಲ್ಲಾ ಅಥವಾ ನಾನು ಉಭಯ ರಾಷ್ಟ್ರಗಳ (ಪಾಕಿಸ್ತಾನ–ಭಾರತ) ನಡುವಿನ ಮಾತುಕತೆಯ ವಿಚಾರವನ್ನು ಪ್ರಸ್ತಾಪಿಸಿದಾಗ ರಾಷ್ಟ್ರವಿರೋಧಿಗಳು ಎಂದು ಯಾಕೆ ಕರೆಯಬೇಕು? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಯುದ್ದ ನಮ್ಮ ಆಯ್ಕೆಯಲ್ಲ. ಮಾತುಕತೆ ಮಾತ್ರ ನಮ್ಮ ಮೂಲ ಮಂತ್ರ. ಯುದ್ಧದ ವೇಳೆ ನಮ್ಮ ಜನರು ಸಾವಿಗೀಡಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ತಮ್ಮ ನಾಗರಿಕರು ಸಾಯುವುದನ್ನು ನೋಡಲು ಯಾವ ನಾಯಕರು ಇಷ್ಟಪಡುತ್ತಾರೆ? ಎಂದು ಪ್ರಶ್ನೆಗಳನ್ನು ಸದನದ ಮುಂದಿಟ್ಟಿದ್ದಾರೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.