ADVERTISEMENT

ಮೇಘಾಲಯದಲ್ಲಿ ಬಾಂಬ್ ಸ್ಫೋಟ: ಎನ್‌ಸಿಪಿ ಅಭ್ಯರ್ಥಿ ಸೇರಿ ನಾಲ್ವರು ಬಲಿ

ಏಜೆನ್ಸೀಸ್
Published 19 ಫೆಬ್ರುವರಿ 2018, 5:16 IST
Last Updated 19 ಫೆಬ್ರುವರಿ 2018, 5:16 IST
ಬೆಂಬಲಿಗರ ಜತೆ ಜೊನಾಥನ್ ಎನ್ ಸಂಗ್ಮಾ (ಚಿತ್ರ ಕೃಪೆ– ಜೊನಾಥನ್ ಎನ್ ಸಂಗ್ಮಾ ಅವರ ಫೇಸ್‌ಬುಕ್ ಪುಟ)
ಬೆಂಬಲಿಗರ ಜತೆ ಜೊನಾಥನ್ ಎನ್ ಸಂಗ್ಮಾ (ಚಿತ್ರ ಕೃಪೆ– ಜೊನಾಥನ್ ಎನ್ ಸಂಗ್ಮಾ ಅವರ ಫೇಸ್‌ಬುಕ್ ಪುಟ)   

ಶಿಲ್ಲಾಂಗ್: ಮೇಘಾಲಯದ ಗರೋ ಹಿಲ್ಸ್ ಪೂರ್ವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಎನ್‌ಸಿಪಿ ಅಭ್ಯರ್ಥಿ ಜೊನಾಥನ್ ಎನ್ ಸಂಗ್ಮಾ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.

ಚುನಾವಣಾ ಪ್ರಚಾರ ಮುಗಿಸಿ ಹಿಂತಿರುಗುತ್ತಿದ್ದಾಗ ಕಚ್ಚಾ ಬಾಂಬ್ ಸ್ಫೋಟಿಸಿದೆ. ಈ ಸಂದರ್ಭ ಸಂಗ್ಮಾ ಮತ್ತು ಅವರ ಖಾಸಗಿ ಭದ್ರತಾ ಸಿಬ್ಬಂದಿ, ಇಬ್ಬರು ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಂಕಿತ ಉಗ್ರರು ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.

ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಘಟನೆಗೆ ಸಂತಾಪ ಸೂಚಿಸಿದ್ದಾರೆ.

ADVERTISEMENT

2013ರ ಚುನಾವಣೆಯಲ್ಲೂ ಸಂಗ್ಮಾ ಅವರು ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆಗ ಅವರಿಗೆ ಜೀವ ಬೆದರಿಕೆ ಇದ್ದುದರಿಂದ ಹೆಚ್ಚುವರಿ ಭದ್ರತೆ ಒದಗಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

60 ಸದಸ್ಯ ಬಲದ ಮೇಘಾಲಯ ವಿಧಾನಸಭೆಗೆ ಫೆಬ್ರುವರಿ 27ರಂದು ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.