ADVERTISEMENT

ಅಸ್ಸಾಂ: ಪ್ರವಾಸೋದ್ಯಮ ಕ್ಯಾಲೆಂಡರ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಚಿತ್ರ– ಕಾಂಗ್ರೆಸ್‌ ವಿರೋಧ

ಏಜೆನ್ಸೀಸ್
Published 21 ಫೆಬ್ರುವರಿ 2018, 5:52 IST
Last Updated 21 ಫೆಬ್ರುವರಿ 2018, 5:52 IST
ಪ್ರಿಯಾಂಕಾ ಚೋಪ್ರಾ(ಸಂಗ್ರಹ ಚಿತ್ರ).
ಪ್ರಿಯಾಂಕಾ ಚೋಪ್ರಾ(ಸಂಗ್ರಹ ಚಿತ್ರ).   

ಗುವಾಹಟಿ: ಅಸ್ಸಾಂ ರಾಜ್ಯದ ಪ್ರವಾಸೋದ್ಯಮದ ಪ್ರಚಾರ ರಾಯಭಾರಿ ಪ್ರಿಯಾಂಕಾ ಚೋಪ್ರಾ ಅವರ ಚಿತ್ರವನ್ನು ಕ್ಯಾಲೆಂಡರ್‌ನಲ್ಲಿ ಪ್ರಕಟಿಸಿರುವುದಕ್ಕೆ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಸ್ಸಾಂ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಎಟಿಡಿಸಿ) ತನ್ನ ವಾರ್ಷಿಕ ಕ್ಯಾಲೆಂಡರ್‌ನಲ್ಲಿ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಅವರ ಚಿತ್ರವನ್ನು ಪ್ರಕಟಿಸಿದೆ.

‘ಪ್ರಿಯಾಂಕಾ ಅಸ್ಸಾಂ ಸಾಂಪ್ರದಾಯಿಕ ಉಡುಪು ಧರಿಸದೇ ಫ್ರಾಕ್‌ ಧರಿಸಿರುವುದು ಸೂಕ್ತವಲ್ಲ’ ಎಂದು ಕಾಂಗ್ರೆಸ್‌ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.