ADVERTISEMENT

ರೊಟೊಮ್ಯಾಕ್‌: ವಿಕ್ರಮ್‌, ಮಗ ರಾಹುಲ್‌ ಸೆರೆ

ಪಿಟಿಐ
Published 22 ಫೆಬ್ರುವರಿ 2018, 19:34 IST
Last Updated 22 ಫೆಬ್ರುವರಿ 2018, 19:34 IST

ನವದೆಹಲಿ: ಏಳು ಬ್ಯಾಂಕುಗಳಿಗೆ ₹3,695 ಕೋಟಿ ವಂಚಿಸಿದ ಆರೋಪ ಎದುರಿಸುತ್ತಿರುವ ರೊಟೊಮ್ಯಾಕ್‌ ಪೆನ್‌ ಕಂಪನಿಯ ಪ್ರವರ್ತಕ ವಿಕ್ರಮ್‌ ಕೊಠಾರಿ ಮತ್ತು ಮಗ ರಾಹುಲ್‌ರನ್ನು ಸಿಬಿಐ ಗುರುವಾರ ಬಂಧಿಸಿದೆ. ನಾಲ್ಕು ದಿನಗಳ ತನಿಖೆಯ ಬಳಿಕ ಈ ಬಂಧನ ನಡೆದಿದೆ.

ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಇಬ್ಬರನ್ನು ಎರಡು ದಿನ ವಿಚಾರಣೆಗೆ ಒಳಪಡಿಸಲಾಗಿತ್ತು. ಬಳಿಕ ಬುಧವಾರ ದೆಹಲಿಗೆ ಬರುವಂತೆ ಸೂಚಿಸಲಾಗಿತ್ತು.

ವಿಕ್ರಮ್‌ ಹೆಂಡತಿ ಸಾಧನಾ ವಿರುದ್ಧವೂ ಎಫ್‌ಐಆರ್‌ ದಾಖಲಿಸಲಾಗಿದೆ. ಅವರನ್ನೂ ಕಾನ್ಪುರದಲ್ಲಿ ವಿಚಾರಣೆ ನಡೆಸಲಾಗಿತ್ತು. ಆದರೆ ದೆಹಲಿಗೆ ಬರುವಂತೆ ಅವರಿಗೆ ಸೂಚಿಸಲಾಗಿಲ್ಲ.

ADVERTISEMENT

ಸಾಲ ನೀಡಿದ ಏಳು ಬ್ಯಾಂಕುಗಳಲ್ಲಿ ಒಂದಾದ ಬ್ಯಾಂಕ್‌ ಆಫ್‌ ಬರೋಡಾ ವಂಚನೆಯ ಬಗ್ಗೆ ಸಿಬಿಐಗೆ ಭಾನುವಾರ ದೂರು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.