ADVERTISEMENT

UP Elections 2022| ಮೊದಲ ಹಂತದ ಚುನಾವಣೆಯಲ್ಲಿ ಶೇ 57.79ರಷ್ಟು ಮತದಾನ

ಐಎಎನ್ಎಸ್
Published 10 ಫೆಬ್ರುವರಿ 2022, 14:27 IST
Last Updated 10 ಫೆಬ್ರುವರಿ 2022, 14:27 IST
ಮತ ಚಲಾವಣೆಯ ನಂತರ ನಗು ಬೀರಿದ ಯುವತಿಯರು
ಮತ ಚಲಾವಣೆಯ ನಂತರ ನಗು ಬೀರಿದ ಯುವತಿಯರು    

ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ ಚುನಾವಣೆಯಲ್ಲಿ ಶೇಕಡಾ 57.79 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

‘ಪ್ರಾಥಮಿಕ ವರದಿಗಳ ಪ್ರಕಾರ ಮೊದಲ ಹಂತದಲ್ಲಿ ಸಂಜೆ 5 ಗಂಟೆಯವರೆಗೆ 57.79 ಶೇಕಡಾ ಮತದಾನವಾಗಿದೆ. ಆದರೂ ಕೆಲವು ಮತಗಟ್ಟೆಗಳ ಅಂಕಿಅಂಶಗಳನ್ನು ಸೇರಿಸಲು ಸಯಮ ಬೇಕಾಗುತ್ತದೆ’ ಎಂದು ಆಯೋಗ ತಿಳಿಸಿದೆ.

ಆಗ್ರಾ ಶೇ 56.52, ಅಲಿಗಢ ಶೇ 57.25, ಬಾಗ್‌ಪತ್ ಶೇ 61.25, ಬುಲಂದ್‌ಶಹರ್ ಶೇ 60.57, ಗೌತಮ್ ಬುದ್ಧ ನಗರ ಶೇ 53.48, ಘಾಜಿಯಾಬಾದ್ ಶೇ 52.43, ಹಾಪುರ್ ಶೇ 60.53, ಮಥುರಾ ಶೇ.58.12, ಮೀರತ್‌ ಶೇ 58.23, ಮುಜಫ್ಪರನಗರ ಶೇ62.09, ಶಾಮ್ಲಿಯಲ್ಲಿ ಶೇಕಡಾ 61.75 ರಷ್ಟು ಮತದಾನವಾಗಿದೆ ಎಂದು ಅಂಕಿಅಂಶಗಳಿಂದ ಗೊತ್ತಾಗಿದೆ.

ADVERTISEMENT

ಉತ್ತರ ಪ್ರದೇಶ ವಿಧಾನಸಭೆಯ ಒಟ್ಟು 403 ಸ್ಥಾನಗಳಿಗೆ ಏಳು ಹಂತದ ಮತದಾನ ನಿಗದಿಯಾಗಿದೆ. ಮೊದಲ ಹಂತದ 58 ಸ್ಥಾನಗಳಿಗೆ ಗುರುವಾರ ಮತದಾನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.