ADVERTISEMENT

ಪಶ್ಚಿಮ ನೇಪಾಳದಲ್ಲಿ ಭೂಕಂಪನ: ಭಾರತದ ಕೆಲವು ಭಾಗಗಳಲ್ಲೂ ಭೂಮಿ ಕಂಪಿಸಿದ ಅನುಭವ

ಭಾರತದ ಕೆಲವು ಭಾಗಗಳಲ್ಲೂ ಭೂಮಿ ಕಂಪಿಸಿದ ಅನುಭವ

ಪಿಟಿಐ
Published 24 ಜನವರಿ 2023, 22:57 IST
Last Updated 24 ಜನವರಿ 2023, 22:57 IST
.
.   

ಕಠ್ಮಂಡು : ಪಶ್ಚಿಮ ನೇಪಾಳದಲ್ಲಿ ಮಂಗಳವಾರ ಮಧ್ಯಾಹ್ನ ಭೂಕಂಪನ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 5.9ರಷ್ಟು ತೀವ್ರತೆ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾನಿಯ ಬಗ್ಗೆ ತಕ್ಷಣಕ್ಕೆ ಯಾವುದೇ ವರದಿಯಾಗಿಲ್ಲ.

‘ಬಹುರಾ ಜಿಲ್ಲೆಯ ಸುದೂರ್‌ಪಶ್ಚಿಮ್‌ ಪ್ರಾಂತ್ಯದ ಮೇಲಾ ಪ್ರದೇಶದಲ್ಲಿ ಭೂಕಂಪನ ಕೇಂದ್ರಬಿಂದು ಪತ್ತೆಯಾಗಿದೆ. ಮಧ್ಯಾಹ್ನ ಸ್ಥಳೀಯ ಕಾಲಮಾನ 2.43ಕ್ಕೆ ಭೂಮಿ ಕಂಪಿಸಿದೆ’ ಎಂದು ಭೂಕಂಪ ಮಾಪನ ಕೇಂದ್ರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

‘ಪಶ್ಚಿಮ ನೇಪಾಳದ ಹಲವು ಕಡೆಗಳಲ್ಲಿ ಮತ್ತು ಭಾರತದ ಕೆಲವು ಭಾಗಗಳಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ’ ಎಂದು ರಾಷ್ಟ್ರೀಯ ಭೂಕಂಪನ ನಿಗಾ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥೆ ಮೋನಿಕಾ ದಹಲ್‌ ತಿಳಿಸಿದ್ದಾರೆ.

ADVERTISEMENT

2022ರ ಡಿಸೆಂಬರ್‌ನಲ್ಲಿ ಪಶ್ಚಿಮ ನೇಪಾಳದಲ್ಲಿ ಮೂರು ಬಾರಿ ಭೂಕಂಪನ ಸಂಭವಿಸಿತ್ತು.

2015ರಲ್ಲಿ ಸಂಭವಿಸಿದ ಭೂಕಂಪದಲ್ಲಿ 9,000 ಜನರು ಮೃತಪಟ್ಟು, 22,000 ಮಂದಿ ಗಾಯಗೊಂಡಿದ್ದರು. ಎಂಟು ಲಕ್ಷ ಮನೆಗಳು, ಶಾಲಾ ಕಟ್ಟಡಗಳು ಹಾನಿಗೊಳಗಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.