ADVERTISEMENT

ಕಾಶ್ಮೀರ ಸ್ಥಳೀಯ ಸಂಸ್ಥೆ ಚುನಾವಣೆ: ಕನಿಷ್ಠ ಮತದಾನ

ಜಮ್ಮು ಮತ್ತು ಕಾಶ್ಮೀರ:

ಪಿಟಿಐ
Published 17 ಅಕ್ಟೋಬರ್ 2018, 19:28 IST
Last Updated 17 ಅಕ್ಟೋಬರ್ 2018, 19:28 IST

ಶ್ರೀನಗರ: ಕಾಶ್ಮೀರದಲ್ಲಿ ನಡೆದ ನಗರ ಸ್ಥಳೀಯ ಚುನಾವಣೆಯಲ್ಲಿ ಕನಿಷ್ಠ ಮತದಾನ ದಾಖಲಾಗಿದ್ದು, ಶೇಕಡ 70ರಷ್ಟು ವಾರ್ಡ್‌ಗಳಲ್ಲಿ ಮತದಾನವೇ ನಡೆದಿಲ್ಲ.

ಜಮ್ಮ ಕಾಶ್ಮೀರ ಚುನಾವಣಾ ಆಯೋಗದ ಪ್ರಕಾರ 598 ವಾರ್ಡ್‌ಗಳಲ್ಲಿ ಕೇವಲ 186 ವಾರ್ಡ್‌ಗಳಲ್ಲಿ ಮಾತ್ರ ಮತದಾನ ನಡೆದಿದೆ. ಉಳಿದ 412 ಕ್ಷೇತ್ರಗಳಿಗೆ (68.89%) ಮತದಾನದ ನಡೆದಿಲ್ಲ.

ಮತಗಟ್ಟೆಗಳಲ್ಲಿ ಭದ್ರತೆಯನ್ನು ಸರ್ಕಾರ ಒದಗಿಸಿದೆ. ಭದ್ರತಾ ದೃಷ್ಟಿಯಿಂದ ಕಣದಲ್ಲಿರುವ ಅಭ್ಯರ್ಥಿಗಳ ಹೆಸರನ್ನು ಬಹಿರಂಗ ಪಡಿಸಿಲ್ಲ. ಹಾಗಾಗಿ, ಚುನಾವಣಾ ಪ್ರಚಾರವೇ ಇಲ್ಲದೆ ಹಲವು ಅಭ್ಯರ್ಥಿಗಳು ಜನರಿಗೆ ಅನಾಮಧೇಯರಾಗಿ ಉಳಿದಿದ್ದಾರೆ.

ADVERTISEMENT

231 ವಾರ್ಡ್‌ಗಳಲ್ಲಿ ಒಬ್ಬರೇ ಅಭ್ಯರ್ಥಿ ಇದ್ದು, ಪ್ರತಿಸ್ಪರ್ಧಿಯೇ ಇಲ್ಲದೇ ಅವಿರೋಧ ಆಯ್ಕೆಯಾಗಿದ್ದಾರೆ.

ಉಗ್ರರ ದಾಳಿ ಭೀತಿಯಿಂದ ಮತದಾನ ಮಾಡಲು ಹಾಗೂ ಚುನಾವಣೆಯಲ್ಲಿ ಸ್ಪಂದಿಸಲು ಯಾರೂ ಮುಂದೆ ಬಾರದ ಕಾರಣ ಮತದಾನ ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.