ADVERTISEMENT

6 ದಿನ ಪೊಲೀಸ್ ವಶಕ್ಕೆ ತೇಜ್‌ಪಾಲ್‌

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2013, 11:20 IST
Last Updated 1 ಡಿಸೆಂಬರ್ 2013, 11:20 IST
ಸಾಂದರ್ಭಿಕ ಚಿತ್ರ/ಪಿಟಿಐ ಚಿತ್ರ
ಸಾಂದರ್ಭಿಕ ಚಿತ್ರ/ಪಿಟಿಐ ಚಿತ್ರ   

ಪಣಜಿ (ಪಿಟಿಐ): ಮಹಿಳಾ ಸಹೋದ್ಯೋಗಿ ಮೇಲೆ ಅತ್ಯಾಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿತ ‘ತೆಹೆಲ್ಕಾ’ ಪ್ರಧಾನ ಸಂಪಾದಕ ತರುಣ್‌ ತೇಜ್‌ಪಾಲ್‌ ಅವರನ್ನು ಆರು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಭಾನುವಾರ ಆದೇಶಿಸಿದ್ದಾರೆ.

ತೇಜ್ ಪಾಲ್ ಅವರನ್ನು ಗೋವಾ ಪೊಲೀಸ್ ಅಪರಾಧ ವಿಭಾಗವು ಭಾನುವಾರ ಬೆಳಿಗ್ಗೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರ ಎದುರು ಹಾಜರುಪಡಿಸಿತು. ಈ ವೇಳೆ ಅವರನ್ನು ವಿಚರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಮನವಿ ಸಲ್ಲಿಸಿತು. 

ಮನವಿ ಪುರಸ್ಕರಿಸಿದ ಮ್ಯಾಜಿಸ್ಟ್ರೇಟ್ ಅವರು ತೇಜ್ ಪಾಲ್ ಅವರನ್ನು ಆರು ದಿನಗಳ ವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ.

ADVERTISEMENT

ಈ ಮೊದಲು ನಿರೀಕ್ಷಣಾ ಜಾಮೀನು ಕೋರಿ ತೇಜಪಾಲ್ ಸಲ್ಲಿಸಿದ್ದ ಅರ್ಜಿಯನ್ನು ಇಲ್ಲಿನ ಸೆಷನ್ಸ್ ನ್ಯಾಯಾಲಯವು ಶನಿವಾರ ತಿರಸ್ಕರಿಸಿತ್ತು. ಬಳಿಕ ರಾತ್ರಿ ವೇಳೆ ಗೋವಾ ಪೊಲೀಸರು ಅವರನ್ನು ಬಂಧಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.