ADVERTISEMENT

ಗಡಿಯಲ್ಲಿ ನಿಷೇಧಿತ ಔಷಧ ಸಾಗಣೆ; ಆರು ಮಂದಿ ಬಂಧನ

ಪಿಟಿಐ
Published 29 ಜುಲೈ 2020, 7:11 IST
Last Updated 29 ಜುಲೈ 2020, 7:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಾಲ್ಡಾ / ಕೃಷ್ಣಗಂಜ್ (ಪಶ್ಚಿಮಬಂಗಾಳ): ನಿಷೇಧಿತ ಕೆಮ್ಮು ನಿವಾರಕ ಸಿರಫ್‌ ಸಾಗಣೆ ಮಾಡುತ್ತಿದ್ದ ಆರು ಮಂದಿಯನ್ನು ಪಶ್ಚಿಮ ಬಂಗಾಳದ ಭಾರತ – ಬಾಂಗ್ಲಾ ಗಡಿಭಾಗದಲ್ಲಿ ಬಂಧಿಸಲಾಗಿದೆ.

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಗಡಿ ಪ್ರದೇಶದಲ್ಲಿನಿಷೇಧಿತ ಕೆಮ್ಮು ನಿವಾರಕ ಸಿರಫ್‌ ಸಾಗಣೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಮಂಗಳವಾರ ಬಿಎಸ್‌ಎಫ್‌ ಯೋಧರು ಬಂಧಿಸಿದ್ದಾರೆ.ಬಂಧಿತರಿಂದ ನಿಷೇಧಿತ ಕೆಮ್ಮಿನ ಔಷಧಗಳ 1325 ಶೀಷೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದೇ ರೀತಿ, ನಾಡಿಯಾದಲ್ಲಿ ಪೊಲೀಸರು ಗೋದಾಮು ಮತ್ತು ಮಾರುಕಟ್ಟೆಯ ಮೇಲೆ ದಾಳಿ ನಡೆಸಿ ದಾಸ್ತಾನು ಮಾಡಲಾಗಿದ್ದ ನಿಷೇಧಿತ 5100 ಕೆಮ್ಮು ನಿವಾರಕ ಔಷಧದಶೀಷೆಗಳನ್ನು ವಶಪಡಿಸಿಕೊಂಡಿದ್ದಾರೆ.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಈ ವರ್ಷದಲ್ಲಿ ಭಾರತ – ಬಾಂಗ್ಲಾ ಗಡಿಭಾಗದಲ್ಲಿ ಗಡಿ ಭದ್ರತಾ ಪಡೆಯವರು ನಿಷೇಧಿತ ಕೆಮ್ಮು ನಿವಾರಕ ಔಷಧಗಳ ಸಾಗಣೆಗೆ ಸಂಬಂಧಿಸಿದಂತೆ 24 ಮಂದಿಯನ್ನು ಬಂಧಿಸಿದ್ದು, 45,590 ಔಷಧದ ಶೀಷೆಗಳನ್ನು ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.