ADVERTISEMENT

ಅಸ್ಸಾಂನಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆ: 8 ಉಗ್ರರ ಹತ್ಯೆ

​ಪ್ರಜಾವಾಣಿ ವಾರ್ತೆ
Published 23 ಮೇ 2021, 16:27 IST
Last Updated 23 ಮೇ 2021, 16:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಗುವಾಹಟಿ:ಅಸ್ಸಾಂನ ಪಶ್ಚಿಮ ಕಾರ್ಬಿ ಆಂಗ್ಲಾಂಗ್‌ ಜಿಲ್ಲೆಯಲ್ಲಿ ಪೊಲೀಸರು ಮತ್ತು ಭದ್ರತಾ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ದಿಮ್ಸಾ ನ್ಯಾಷನಲ್‌ ಲಿಬರೇಷನ್‌ ಆರ್ಮಿ (ಡಿಎನ್‌ಎಲ್‌ಎ) ಸಂಘಟನೆಗೆ ಸೇರಿದ 8 ಉಗ್ರರು ಹತರಾಗಿದ್ದಾರೆ.

ನಾಗಾಲ್ಯಾಂಡ್‌ ಗಡಿಗೆ ಸಮೀಪದ ಕಾರ್ಬಿ ಆಂಗ್ಲಾಂಗ್‌ನ ಧಾನ್ಸಿರಿ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ‘ಮೃತ ಉಗ್ರರಿಂದ 4 ಎಕೆ–47 ರೈಫಲ್‌ ಸಹಿತ ಅಪಾರ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಅಸ್ಸಾಂನ ವಿಶೇಷ ಪೊಲೀಸ್‌ ಮಹಾನಿರ್ದೇಶಕ ಜಿ.ಪಿ.ಸಿಂಗ್‌ ತಿಳಿಸಿದರು.

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಶಂಕಿತ ಡಿಎನ್‌ಎಲ್‌ಎ ಉಗ್ರರಿಂದ ಇಬ್ಬರು ವ್ಯಾಪಾರಿಗಳ ಹತ್ಯೆಯಾದ ನಂತರ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ‘ಜಿಲ್ಲೆಯಲ್ಲಿ ಕೊಲೆ, ಸುಲಿಗೆ ಮಾಡುತ್ತಿದ್ದ ಡಿಎನ್‌ಎಲ್‌ಎ ಸಂಘಟನೆಯ ಉಗ್ರರನ್ನು ಬಂಧಿಸಲು ಕಾರ್ಯಾಚರಣೆ ಕೈಗೊಳ್ಳಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.