ADVERTISEMENT

ಗುಜರಾತ್‌ನಲ್ಲಿ ಭಾರಿ ಮಳೆ ಮುನ್ಸೂಚನೆ; ಎನ್‌ಡಿಆರ್‌ಎಫ್‌ನ 6 ತಂಡಗಳು ಸನ್ನದ್ಧ

ಐಎಎನ್ಎಸ್
Published 3 ಜುಲೈ 2022, 10:04 IST
Last Updated 3 ಜುಲೈ 2022, 10:04 IST
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಸಂಗ್ರಹ ಚಿತ್ರ)
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಸಂಗ್ರಹ ಚಿತ್ರ)   

ವಡೋದರ: ಗುಜರಾತ್‌ನಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ ಬೆನ್ನಲ್ಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು (ಎನ್‌ಡಿಆರ್‌ಎಫ್) ಆರು ತಂಡಗಳನ್ನು ರಾಜ್ಯದ ವಿವಿಧ ಭಾಗಗಳಿಗೆ ನಿಯೋಜಿಸಿದೆ.

'ಆನಂದ್‌, ನವಸಾರಿ ಮತ್ತು ಗಿರ್‌ ಸೋಮನಾಥ ಜಿಲ್ಲೆಗಳಲ್ಲಿ ಮೂರು ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಉಳಿದಂತೆ ಇನ್ನೂ ಆರು ತಂಡಗಳನ್ನು ಸಜ್ಜುಗೊಳಿಸಲಾಗಿದೆ. ಅದರಲ್ಲಿ ಮೂರು ತಂಡಗಳು ರಾಜ್‌ಕೋಟ್‌ನಲ್ಲಿ, ಎರಡು ಗಾಂಧಿನಗರದಲ್ಲಿ, ತಲಾ ಒಂದು ತಂಡ ಸೂರತ್‌ ಮತ್ತು ಬನಸ್ಕಾಂತ ಜಿಲ್ಲೆಗಳಲ್ಲಿ ಕಾರ್ಯಾಚರಿಸಲಿವೆ' ಎಂದು ಎನ್‌ಡಿಆರ್‌ಎಫ್‌ನ 6ನೇ ಬೆಟಾಲಿಯನ್‌ನ ಉಪ ಕಮಾಂಡಂಟ್‌ ಅನುಪಮ್‌ ತಿಳಿಸಿದ್ದಾರೆ.

ರಾಜಸ್ಥಾನದಲ್ಲಿ ಮೂರು ತಂಡಗಳನ್ನು ನಿಯೋಜಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ಗುಜರಾತ್‌ನ ಹಲವು ಜಿಲ್ಲೆಗಳಲ್ಲಿಜುಲೈ 3ರಿಂದ ಮುಂದಿನ ಐದು ದಿನಗಳವರೆಗೆ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕಳೆದ 24 ಗಂಟೆಗಳಲ್ಲಿ (ಜುಲೈ 2ರ ಬೆಳಗ್ಗೆ 8ರಿಂದ ಜುಲೈ 3ರ ಬೆಳಗ್ಗೆ 8ರ ವರೆಗೆ) ನವಸಾರಿಜಿಲ್ಲೆಯ ವನ್ಸದಾ ಪಟ್ಟಣದಲ್ಲಿ 136 ಮಿ.ಮೀ ಮಳೆ ಸುರಿದಿದೆ. ಅದೇರೀತಿ ದೇವಭೂಮಿ ದ್ವಾರಕ ಜಿಲ್ಲೆಯ ಕಂಭಾಲಿಯಾ ತಾಲ್ಲೂಕಿನಲ್ಲಿ 114 ಮಿ.ಮೀ., ಜುನಾಗಢದ ಮಾನವದರ್‌ನಲ್ಲಿ 106 ಮಿ.ಮೀ, ತಪಿ ಜಿಲ್ಲೆಯ ಡೊಲ್ವಾಕ್‌ ತಾಲ್ಲೂಕಿನಲ್ಲಿ 98 ಮಿ.ಮೀ. ಮಳೆ ಸುರಿದಿದೆ. ಇದೇ ಅವಧಿಯಲ್ಲಿ ರಾಜ್ಯದ 110 ತಾಲ್ಲೂಕುಗಳಲ್ಲಿ 5 ಮಿ.ಮೀ.ಗಿಂತ ಹೆಚ್ಚು ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.