ADVERTISEMENT

ಜಮ್ಮು ಕಾಶ್ಮೀರ: ಕ್ವಾರಂಟೈನ್‌ನಲ್ಲಿದ್ದ 6 ಮಂದಿಗೆ ಕೋವಿಡ್ ದೃಢ

ಜುಲ್ಫಿಕರ್ ಮಜಿದ್
Published 5 ಏಪ್ರಿಲ್ 2020, 10:05 IST
Last Updated 5 ಏಪ್ರಿಲ್ 2020, 10:05 IST
ಕಾಶ್ಮೀರದಲ್ಲಿ ಸೋಂಕು ನಿವಾರಕ ಸಿಂಪಡಣೆ
ಕಾಶ್ಮೀರದಲ್ಲಿ ಸೋಂಕು ನಿವಾರಕ ಸಿಂಪಡಣೆ   

ಶ್ರೀನಗರ:ಕಳೆದ ಕೆಲವು ದಿನಗಳಿಂದ ಕ್ವಾರಂಟೈನ್‌ನಲ್ಲಿದ್ದ 6 ಮಂದಿಗೆ ಕೋವಿಡ್ ರೋಗವಿರುವುದಾಗಿ ದೃಢಪಟ್ಟಿದೆ. ಮೂವರು ಮಹಿಳೆ ಮತ್ತು ಮೂವರು ಪುರುಷರಿಗೆರೋಗ ತಗುಲಿದ್ದು ಇವರು ದೆಹಲಿಯ ನಿಜಾಮುದ್ದೀನ್ ಮರ್ಕಜ್‌‌ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದವರಾಗಿದ್ದಾರೆ.

ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ರೋಗಿಗಳ ಒಡನಾಡಿಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ರೋಗಿಗಳ ಪೈಕಿ ನಾಲ್ವರನ್ನು ಐಟಿಐ ಹಂದ್ವಾರಾದಲ್ಲಿ ಕ್ವಾರಂಟೈನ್‌ನಲ್ಲಿರಿಸಲಾಗಿತ್ತು. ಇನ್ನುಳಿದ ಇಬ್ಬರನ್ನು ತಂಗ್‌ಧರ್ ಮತ್ತು ಬಂದೀಪೊರದಲ್ಲಿ ಕ್ವಾರಂಟೈನ್‌ನಲ್ಲಿರಿಸಲಾಗಿತ್ತು.

ಕುಪ್ವಾರದಲ್ಲಿ ಕೋವಿಡ್ -19 ರೋಗಿಗಳ ಮೇಲ್ವಿಚಾರಣೆ ವಹಿಸಿರುವಅಧಿಕಾರಿ ನಜೀರ್ ಅಹ್ಮದ್ ಪ್ರಕಾರ, ಕೋವಿಡ್ ರೋಗಿಗಳು ದೆಹಲಿಯಿಂದ ಬಂದ ನಂತರ ಅವರ ಮನೆಗೆ ಮರಳಿಲ್ಲ ಎಂದಿದ್ದಾರೆ.ಆದಾಗ್ಯೂ, ಕ್ವಾರಂಟೈನ್ ಕೇಂದ್ರದಲ್ಲಿರವ ರೋಗಿಗಳಿಂದ ಇತರರಿಗೆ ರೋಗ ಹರಡಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ADVERTISEMENT

ಕೋವಿಡ್ -19 ಬಗ್ಗೆ ಮಂಜಾಗ್ರತೆ ವಹಿಸಲು ಹೇಳಿದ್ದರೂ ಮಾರ್ಚ್ 8-10ರವರೆಗೆ ನಡೆದ ಧಾರ್ಮಿಕ ಸಭೆಯಲ್ಲಿ ವಿದೇಶಿಯರು ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.ತಬ್ಲೀಗಿ ಜಮಾತ್‌ನಲ್ಲಿ ಭಾಗವಹಿಸಿದ 1023 ಜನರಿಗೆ ಕೋವಿಡ್ ರೋಗ ಇರುವುದಾಗಿ ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.