ADVERTISEMENT

ಕೋವಿಡ್‌: ಜೆಎನ್‌.1 ಉಪ ತಳಿಯ 63 ಪ್ರಕರಣ ದಾಖಲು

ಪಿಟಿಐ
Published 25 ಡಿಸೆಂಬರ್ 2023, 13:56 IST
Last Updated 25 ಡಿಸೆಂಬರ್ 2023, 13:56 IST
Omicron Covid variant B.1.1.529. Coronavirus with tag. 3D rendering isolated on white background
iStock-1355794380 Omicron.jpg
Omicron Covid variant B.1.1.529. Coronavirus with tag. 3D rendering isolated on white background iStock-1355794380 Omicron.jpg   

ನವದೆಹಲಿ: ಕೊರೊನಾ ವೈರಸ್‌ನ ಹೊಸ ಉಪತಳಿ ಜೆಎನ್‌.1ರ ಎಂಟು ಪ್ರಕರಣಗಳು ಕರ್ನಾಟಕದಲ್ಲಿ ಪತ್ತೆಯಾಗಿವೆ. ದೇಶದಲ್ಲಿ ಈ ತಳಿಯ ಒಟ್ಟು 63 ಪ್ರಕರಣಗಳು ಭಾನುವಾರದವರೆಗೆ ವರದಿಯಾಗಿವೆ ಎಂದು ಮೂಲಗಳು ಸೋಮವಾರ ತಿಳಿಸಿವೆ.

ಮಹಾರಾಷ್ಟ್ರದಲ್ಲಿ 9, ಕೇರಳದಲ್ಲಿ 6, ತಮಿಳುನಾಡಿನಲ್ಲಿ 4 ಮತ್ತು ತೆಲಂಗಾಣದಲ್ಲಿ 2 ಪ್ರಕರಣಗಳು ವರದಿಯಾಗಿವೆ.

ಆಸ್ಪತ್ರೆಗೆ ದಾಖಲಾಗುವ ಪ್ರಮಾಣದಲ್ಲಿ ಯಾವುದೇ ಏರಿಕೆಯಾಗಿಲ್ಲ. ಇತರ ವೈದ್ಯಕೀಯ ಕಾರಣಗಳಿಗೆ ಆಸ್ಪತ್ರೆಗೆ ದಾಖಲಾದವರಲ್ಲಿ ಕೋವಿಡ್-19 ಪ್ರಾಸಂಗಿಕವಾಗಿ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ದೇಶದಲ್ಲಿ ಒಂದೇ ದಿನ ಕೋವಿಡ್‌ನ 628 ಹೊಸ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 4,054ಕ್ಕೆ ಏರಿದೆ. ಕಳೆದ 24 ತಾಸುಗಳ ಅವಧಿಯಲ್ಲಿ ಕೇರಳದಲ್ಲಿ ಕೋವಿಡ್‌ನಿಂದ ಒಬ್ಬರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.

ಮಹಾರಾಷ್ಟ್ರ ಕೃಷಿ ಸಚಿವರಿಗೆ ಕೋವಿಡ್‌
ಮುಂಬೈ: ಮಹಾರಾಷ್ಟ್ರದ ಕೃಷಿ ಸಚಿವ ಧನಂಜಯ್ ಮುಂಡೆ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ರಾಜ್ಯದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೋಮವಾರ ತಿಳಿಸಿದ್ದಾರೆ. ‘ವೈರಲ್ ಸೋಂಕಿನ ಬಗ್ಗೆ ಭಯಪಡುವ ಅಗತ್ಯವಿಲ್ಲ. ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದು ಕೋವಿಡ್‌ ತಡೆಗೆ ಅಗತ್ಯ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಪವಾರ್ ಸುದ್ದಿಗಾರರಿಗೆ ತಿಳಿಸಿದರು. ಮುಂಡೆ ಅವರಿಗೆ ಕೋವಿಡ್‌ ದೃಢಪಟ್ಟಿರುವುದನ್ನು ಅವರ ಕಚೇರಿಯು ‌‌ಖಚಿತಪಡಿಸಿದೆ. ಆದರೆ ಅವರಿಗೆ ಕಾಣಿಸಿರುವ ಕೋವಿಡ್‌ ರೂಪಾಂತರಿ ತಳಿಯ ವಿವರ ಬಹಿರಂಗಪಡಿಸಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.