ADVERTISEMENT

ಕಾಶ್ಮೀರದಲ್ಲಿ ಭದ್ರತೆಗೆ ಕ್ರಮ; ಏಳು ಹೊಸ ಠಾಣೆ ಸ್ಥಾಪನೆ

ಪಿಟಿಐ
Published 25 ಜೂನ್ 2020, 10:48 IST
Last Updated 25 ಜೂನ್ 2020, 10:48 IST
ಜಮ್ಮು ಪೊಲೀಸ್ ಠಾಣೆ (ಸಂಗ್ರಹ ಚಿತ್ರ)
ಜಮ್ಮು ಪೊಲೀಸ್ ಠಾಣೆ (ಸಂಗ್ರಹ ಚಿತ್ರ)   

ಜಮ್ಮು : ಕಾಶ್ಮೀರದ ದಕ್ಷಿಣ ಭಾಗದಲ್ಲಿ ಭದ್ರತೆಯನ್ನು ಇನ್ನಷ್ಟು ಬಲಪಡಿಸುವ ಕ್ರಮವಾಗಿ ಏಳು ನೂತನ ಠಾಣೆಗಳನ್ನು ಸ್ಥಾಪಿಸಲು ಹಾಗೂ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲು ಜಮ್ಮು ಮತ್ತು ಕಾಶ್ಮೀರದ ಆಡಳಿತವು ನಿರ್ಧರಿಸಿದೆ.

ಈ ಪ್ರದೇಶವು ಕೆಲವು ವರ್ಷಗಳಿಂದ ಉಗ್ರ ಚಟುವಟಿಕೆಗಳ ತಾಣವಾಗಿದೆ. ಉಗ್ರ ಸಂಘಟನೆಗಳು ಈ ಭಾಗದಲ್ಲಿ ಹೆಚ್ಚಿನ ಜನರನ್ನು ಸೇರಿಸಿ ಕೊಳ್ಳುತ್ತಿವೆ. ಪುಲ್ವಾಮಾ ದಾಳಿ ಕೂಡಾ ಈ ಭಾಗದಲ್ಲಿಯೇ ನಡೆದಿತ್ತು ಎಂಬ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಕ್ವಾಜಿಗುಂದ್‌ನಲ್ಲಿ ಕೇಂದ್ರ ಸ್ಥಾನ ಇರುವಂತೆ ಹೆದ್ದಾರಿ ವ್ಯಾಪ್ತಿಗೊಳಪಟ್ಟು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಮತ್ತು ಹಿಲ್ಲರ್‌‌, ದಕ್ಷುಂ, ಹತಿಪೊರಾ,ನಿಲ್ಲೊ, ಚುರ್ಸೂವಿನಲ್ಲಿ ಠಾಣೆ ಸ್ಥಾಪನೆ, ಬೆಹಿಬಾಗ್‌ ಠಾಣೆ ಉನ್ನತೀಕರಣ ಕಾರ್ಯ ಕೈಗೊಳ್ಳಲಾಗುವುದು ಎಂದು ಆದೇಶ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.