ADVERTISEMENT

₹70 ಸಾವಿರಕ್ಕೆ ಪ್ರಾಣ ಉಳಿಸುವ ವೆಂಟಿಲೇಟರ್ ಸಿದ್ಧ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 1:35 IST
Last Updated 27 ಮಾರ್ಚ್ 2020, 1:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ (ಪಿಟಿಐ): ದೇಶದಲ್ಲಿ ದಿನೇದಿನೇ ಕೋವಿಡ್–19 ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ, ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಕಡಿಮೆ ವೆಚ್ಚದಪೋರ್ಟಬಲ್ವೆಂಟಿಲೇಟರ್‌ಗಳನ್ನು ಅಭಿವೃದ್ಧಿ ಪಡಿಸುತ್ತಿದೆ.

ಈವೆಂಟಿಲೇಟರ್‌ಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿರುದವೆಂಟಿಲೇಟರ್‌ಗಳಿಗಿಂತ ಕಡಿಮೆ ದರದ್ದಾಗಿವೆ.‘ಮಾರುಕಟ್ಟೆಯಲ್ಲಿ ಪ್ರಸ್ತುತ ಒಂದುವೆಂಟಿಲೇಟರ್ಬೆಲೆ ಸುಮಾರು ₹ 40 ಲಕ್ಷವಿದೆ. ಆದರೆ, ಭಾರತದಲ್ಲಿ ಲಭ್ಯವಿರುವ ಸಾಮಾಗ್ರಿ ಬಳಸಿಕೊಂಡು ಕಾನ್ಪುರ ಐಐಟಿ ₹ 70 ಸಾವಿರ ವೆಚ್ಚದಲ್ಲಿವೆಂಟಿಲೇಟರ್‌ಗಳನ್ನು ತಯಾರಿಸುತ್ತಿದೆ’ ಎಂದು ಕಾನ್ಪುರ ಐಐಟಿಯ ಪ್ರಾಧ್ಯಾಪಕರೊಬ್ಬರು ಮಾಹಿತಿ ನೀಡಿದ್ದಾರೆ.

‘ನೋಕಾ ರೊಬೊಟಿಕ್ಸ್’ ನವೋದ್ಯಮ ಸಂಸ್ಥೆ ನಡೆಸುತ್ತಿರುವ ಕಾನ್ಪುರ ಐಐಟಿಯ ಪದವೀಧರರಾದ ನಿಖಿಲ್ ಕುರ್ಲೆ ಮತ್ತು ಹರ್ಷಿತ್ ರಾಥೋಡ್,ಪೋರ್ಟಬಲ್ವೆಂಟಿಲೇಟರ್‌ಗಳ ಮೂಲಮಾದರಿಯನ್ನು ಅಭಿವೃದ್ಧಿ ಪಡಿಸಿದ್ದಾರೆ.

ADVERTISEMENT

ಬೆಂಗಳೂರಿನ ನಾರಾಯಣ ಹೃದ್ರೋಗ ಚಿಕಿತ್ಸಾ ಕೇಂದ್ರದ (ಎನ್‌ಐಸಿಎಸ್‌) ವೈದ್ಯರು ಸೇರಿದಂತೆ ಒಟ್ಟು ಒಂಬತ್ತು ಸದಸ್ಯರ ತಂಡವನ್ನು ಕಾನ್ಪುರ ಐಐಟಿ ರಚಿಸಿದೆ.ವೆಂಟಿಲೇಟರ್‌ನ ಮೂಲಮಾದರಿಯನ್ನು ಈ ತಂಡವು ಪರಿಶೀಲಿಸಿದ್ದು, ಒಂದು ತಿಂಗಳಲ್ಲಿ ಸುಮಾರು 1 ಸಾವಿರಪೋರ್ಟಬಲ್ವೆಂಟಿಲೇಟರ್‌ಗಳು ತಯಾರಾಗಲಿವೆ ಎನ್ನಲಾಗಿದೆ. ವೆಂಟಿಲೇಟರ್‌ಗಳ ಉತ್ಪಾದನಾ ವೆಚ್ಚವನ್ನು ‘ಕೇರ್ ಇನ್ ಇಂಡಿಯಾ’ ಕ್ರೌಡ್ ಸೋರ್ಸಿಂಗ್ ಫ್ಲಾಟ್‌ಫಾರಂ ನೆರವಿನಿಂದ ಪಡೆಯಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.