ADVERTISEMENT

ತ್ರಿವಳಿ ತಲಾಖ್‌: 71 ಮಂದಿ ವಿರುದ್ಧ ಪ್ರಕರಣ

ಪಿಟಿಐ
Published 31 ಜುಲೈ 2020, 10:31 IST
Last Updated 31 ಜುಲೈ 2020, 10:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಜಾಫ್ಫರನಗರ: ಕಳೆದ ಒಂದು ವರ್ಷದಲ್ಲಿಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ತ್ರಿವಳಿ ತಲಾಖ್ ನೀಡಿದ‌ ಆರೋಪದಡಿ 71 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, 62 ಮಂದಿಯನ್ನು ಬಂಧಿಸಲಾಗಿದೆ.

19 ತ್ರಿವಳಿ ತಲಾಖ್‌ ಪ್ರಕರಣಗಳಲ್ಲಿ 71 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ 16 ಪ್ರಕರಣಗಳಲ್ಲಿ 62 ಮಂದಿಯ ವಿರುದ್ದ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ವಿನೀತ್‌ ಜೈಸ್ವಾಲ್‌ ಅವರು ತಿಳಿಸಿದರು.

71 ಮಂದಿಯಲ್ಲಿ 9 ಮಂದಿ ನಿರಪರಾಧಿಗಳು ಎಂದು ತನಿಖೆ ವೇಳೆ ತಿಳಿದುಬಂದಿದೆ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.