ADVERTISEMENT

ಅಂಗವಿಕಲ ಬಾಲಕಿಗೆ ಲೈಂಗಿಕ ದೌರ್ಜನ್ಯ: ವೃದ್ಧನಿಗೆ 10 ವರ್ಷ ಕಠಿಣ ಶಿಕ್ಷೆ

ಪಿಟಿಐ
Published 14 ಮಾರ್ಚ್ 2019, 20:05 IST
Last Updated 14 ಮಾರ್ಚ್ 2019, 20:05 IST

ಬಾಲಸೋರ್ (ಒಡಿಶಾ): ಐದು ವರ್ಷಗಳ ಹಿಂದೆ ಅಂಗವಿಕಲ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ 72 ವರ್ಷದ ವೃದ್ಧನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ, ಹತ್ತು ಸಾವಿರ ದಂಡವನ್ನು ಇಲ್ಲಿನ ಜಿಲ್ಲಾ ಹೆಚ್ಚುವರಿ ನಾಯ್ಯಾಧೀಶ ಅಜಂತ ಸದಾಂಗಿ ವಿಧಿಸಿದ್ದಾರೆ.

ಜೇನ ಎಂಬ ವೃದ್ಧ ಹಲವು ತಿಂಗಳು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ, ಈತನಿಗೆ ಹೆದರಿ ಬಾಲಕಿ ಈ ವಿಚಾರವನ್ನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಕೊನೆಗೆ ತಾಯಿಗೆ ಈ ವಿಚಾರ ತಿಳಿದು 2014ರ ಸೆಪ್ಟೆಂಬರ್ 28ರಂದು ಕಾಮರ್ದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT