ADVERTISEMENT

ಕರ್ನಾಟಕ ಸೇರಿದಂತೆ 8 ರಾಜ್ಯಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಳ

6 ಕೋಟಿ ಜನರಿಗೆ ಕೋವಿಡ್ –19 ಲಸಿಕೆ– ಕೇಂದ್ರ ಆರೋಗ್ಯ ಸಚಿವಾಲಯ

ಪಿಟಿಐ
Published 30 ಮಾರ್ಚ್ 2021, 2:48 IST
Last Updated 30 ಮಾರ್ಚ್ 2021, 2:48 IST
ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ ಸೂಚಿಸುವ ಗ್ರಾಫಿಕ್ಸ್
ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ ಸೂಚಿಸುವ ಗ್ರಾಫಿಕ್ಸ್   

ನವದೆಹಲಿ: ಮಹಾರಾಷ್ಟ್ರ, ಕರ್ನಾಟಕ ಮತ್ತು ಪಂಜಾಬ್ ಸೇರಿದಂತೆ ದೇಶದ 8 ರಾಜ್ಯಗಳಲ್ಲಿ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಸೋಮವಾರ ದೇಶದಲ್ಲಿ ಒಟ್ಟು 68,020 ಹೊಸ ಪ್ರಕರಣಗಳು (ಶೇ 84.5) ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಮತ್ತೊಂದೆಡೆ ದೇಶದಲ್ಲಿ ಕೋವಿಡ್–19 ಲಸಿಕೆ ಪಡೆದವರ ಸಂಖ್ಯೆ 6 ಕೋಟಿ ದಾಟಿದೆ ಎಂದೂ ಸಚಿವಾಲಯವು ಮಾಹಿತಿ ನೀಡಿದೆ.

ಮಹಾರಾಷ್ಟ್ರದಲ್ಲಿ ಅತಿಹೆಚ್ಚು ದೈನಂದಿನ ಪ್ರಕರಣಗಳು ಅಂದರೆ ಒಟ್ಟು 40,414 ಪ್ರಕರಣಗಳು ದಾಖಲಾಗಿದ್ದರೆ, ಕರ್ನಾಟಕದಲ್ಲಿ 3,082, ಪಂಜಾಬ್‌ನಲ್ಲಿ 2,870, ಮಧ್ಯಪ್ರದೇಶದಲ್ಲಿ 2,276, ಗುಜರಾತ್‌ನಲ್ಲಿ 2,270, ಕೇರಳದಲ್ಲಿ 2,216, ತಮಿಳುನಾಡಿನಲ್ಲಿ 2,194 ಹಾಗೂ ಛತ್ತೀಸಗಡದಲ್ಲಿ 2,153 ಪ್ರಕರಣಗಳು ದಾಖಲಾಗಿವೆ ಎಂದು ಸಚಿವಾಲಯದ ಅಂಕಿ–ಅಂಶಗಳು ತಿಳಿಸಿವೆ.

ADVERTISEMENT

ಭಾರತದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 5,21,808ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರ, ಕೇರಳ, ಪಂಜಾಬ್, ಕರ್ನಾಟಕ ಮತ್ತು ಛತ್ತೀಸ್‌ಗಡದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆಯು ಶೇ 80.17ರಷ್ಟಿದೆ. 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಡಿಮೆ ಪ್ರಕರಣಗಳು ವರದಿಯಾಗಿವೆ.

ಮಹಾರಾಷ್ಟ್ರ, ಗುಜರಾತ್, ಪಂಜಾಬ್, ಮಧ್ಯಪ್ರದೇಶ, ದೆಹಲಿ, ತಮಿಳುನಾಡು, ಛತ್ತೀಸಗಡ, ಕರ್ನಾಟಕ, ಹರಿಯಾಣ ಮತ್ತು ರಾಜಸ್ಥಾನಗಳಲ್ಲಿ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರುಗತಿಯಾಗುತ್ತಿದೆ ಎಂದು ಆರೋಗ್ಯ ಸಚಿವಾಲಯವು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.