ADVERTISEMENT

9 ಸಿಬ್ಬಂದಿ ಅಮಾನತು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2012, 19:30 IST
Last Updated 7 ಏಪ್ರಿಲ್ 2012, 19:30 IST

ಅಲಹಾಬಾದ್ (ಪಿಟಿಐ): ಇಲ್ಲಿನ ಬಾಲಮಂದಿರದಲ್ಲಿ ಮೂವರು ಬಾಲಕಿಯರ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಸಿಬ್ಬಂದಿಯನ್ನು ಕರ್ತವ್ಯ ಲೋಪ ಆರೋಪದ ಮೇಲೆ ಜಿಲ್ಲಾ ಆಡಳಿತ ಶನಿವಾರ ಅಮಾನತುಗೊಳಿಸಿದೆ.

ಬಾಲಮಂದಿರದ ಸಹಾಯಕ ವಿದ್ಯಾಭೂಷಣ ಓಜಾ ಅಲ್ಲಿನ ಅಪ್ರಾಪ್ತ ಬಾಲಕಿಯರ ಮೇಲೆ ನಡೆಸುತ್ತಿದ್ದ ದೌರ್ಜನ್ಯ ಬೆಳಕಿಗೆ ಬಂದ ನಂತರ ಮೇಲ್ವಿಚಾರಕಿ ಊರ್ಮಿಳಾ ಗುಪ್ತಾ ಅವರನ್ನು ಅಮಾನತು ಮಾಡಲಾಗಿತ್ತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.