ADVERTISEMENT

ಗಂಗಾ ನದಿಗೆ ಉರುಳಿಬಿದ್ದ ಪಿಕಪ್‌ ವಾಹನ: ಒಂಬತ್ತು ಮಂದಿ ಸಾವು

ಪಿಟಿಐ
Published 23 ಏಪ್ರಿಲ್ 2021, 9:14 IST
Last Updated 23 ಏಪ್ರಿಲ್ 2021, 9:14 IST
ಪಟ್ಣಾದ ಪಿಪಾಪುಲ್‌ ಬಳಿ  ಗಂಗಾನದಿಗೆ ಉರುಳಿಬಿದ್ದ ವಾಹನವನ್ನು ಹೊರ ತೆಗೆಯುತ್ತಿರುವ ಎನ್‌ಡಿಆರ್‌ಎಫ್‌ ತಂಡ.
ಪಟ್ಣಾದ ಪಿಪಾಪುಲ್‌ ಬಳಿ  ಗಂಗಾನದಿಗೆ ಉರುಳಿಬಿದ್ದ ವಾಹನವನ್ನು ಹೊರ ತೆಗೆಯುತ್ತಿರುವ ಎನ್‌ಡಿಆರ್‌ಎಫ್‌ ತಂಡ.   

ಪಟ್ನಾ (ಬಿಹಾರ): ಇಲ್ಲಿನ ದಾನಪುರ ಪ್ರದೇಶದಲ್ಲಿ ಶುಕ್ರವಾರ ಗಂಗಾ ನದಿಯಲ್ಲಿ ದೋಣಿಗಳನ್ನು ಸೇರಿಸಿ ನಿರ್ಮಿಸಿದ ಸೇತುವೆಯ ಮೇಲಿನಿಂದ ಪಿಕ್‌ಅಪ್‌ ಜೀಪು ಉರುಳಿಬಿದ್ದು 9 ಮಂದಿ ಮೃತಪಟ್ಟಿದ್ದಾರೆ.

ವಾಹನದಲ್ಲಿ 13 ಮಂದಿ ಇದ್ದರು. ನಾಲ್ವರು ಈಜಿ ಪಾರಾಗಿದ್ದಾರೆ ಎಂದುಜಿಲ್ಲಾಧಿಕಾರಿ ಚಂದ್ರಶೇಖರ್ ಸಿಂಗ್ ತಿಳಿಸಿದ್ದಾರೆ.

ದಾನಪುರದ ಚಿತ್ರಕೂಟ ನಗರದಲ್ಲಿ ನಡೆದ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಅಖಿಪುರಕ್ಕೆ ವಾಪಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ವಾಹನ ನದಿಗೆ ಧುಮುಕಿತ್ತು.

ADVERTISEMENT

ಎನ್‌ಡಿಆರ್‌ಎಫ್‌ ಸಿಬ್ಬಂದಿ ಪರಿಹಾರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೃತರ ಕುಟುಂಬಕ್ಕೆ ತಲಾ ₹ 4 ಲಕ್ಷ ಪರಿಹಾರ ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.