ADVERTISEMENT

ಏ.1ರಿಂದ ಸರ್ಕಾರದ 9 ಲಕ್ಷ ಹಳೆ ವಾಹನಗಳ ಬಳಕೆ ಸ್ಥಗಿತ: ಗಡ್ಕರಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2023, 15:15 IST
Last Updated 30 ಜನವರಿ 2023, 15:15 IST
ನಿತಿನ್‌ ಗಡ್ಕರಿ
ನಿತಿನ್‌ ಗಡ್ಕರಿ   

ನವದೆಹಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿರುವ 15 ವರ್ಷಕ್ಕಿಂತಲೂ ಹಳೆಯದಾದ ಸುಮಾರು 9 ಲಕ್ಷ ವಾಹನಗಳ ಬಳಕೆಯನ್ನು ಏಪ್ರಿಲ್‌ 1ರಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗುವುದು.

ಸೋಮವಾರ ಎಫ್‌ಐಸಿಸಿಐ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು, ‘ಈ ವಾಹನಗಳ ಬದಲಿಗೆ, ಪರ್ಯಾಯ ಇಂಧನ ಆಧಾರಿತ ನೂತನ ವಾಹನಗಳು ಬಳಕೆಯಾಗಲಿವೆ’ ಎಂದು ತಿಳಿಸಿದರು.

ಪರಿಸರ, ವಾಯು ಮಾಲಿನ್ಯಕ್ಕೆ ಕಾರಣವಾಗುವ ವಾಹನಗಳ ಬಳಕೆಯನ್ನು ಕೈಬಿಡುವುದು ಹಾಗೂ ಪರ್ಯಾಯ ಇಂಧನ ಆಧಾರಿತ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿದರು.

ADVERTISEMENT

15 ವರ್ಷಕ್ಕಿಂತಲೂ ಹಳೆಯದಾದ ವಾಹನಗಳ ಬಳಕೆಯನ್ನು ಏಪ್ರಿಲ್ 1ರಿಂದ ಕೈಬಿಡಬೇಕು. ಈ ಆದೇಶವು ರಕ್ಷಣಾ ಇಲಾಖೆ ಮತ್ತು ಆಂತರಿಕ ಭದ್ರತೆಗೆ ಸಂಬಂಧಿತ ವಾಹನಗಳಿಗೆ ಅನ್ವಯವಾಗುವುದಿಲ್ಲ ಎಂದು ಭೂಸಾರಿಗೆ ಸಚಿವಾಲಯವು ಇತ್ತೀಚೆಗೆ ಅಧಿಸೂಚನೆ ಹೊರಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.