ADVERTISEMENT

ತಂದೆ ಕೊಲೆಗೆ ಪುತ್ರನೇ ಸಾಕ್ಷಿ: ಸೆರೆಯಾದ ತಾಯಿ

ಪಿಟಿಐ
Published 18 ಜೂನ್ 2025, 21:33 IST
Last Updated 18 ಜೂನ್ 2025, 21:33 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಜೈಪುರ: ಒಂಬತ್ತು ವರ್ಷದ ಪುತ್ರ ಹೇಳಿದ ಸಾಕ್ಷ್ಯ ಪರಿಗಣಿಸಿದ ಪೊಲೀಸರು, ಪ್ರಿಯಕರನೊಂದಿಗೆ ಸೇರಿಕೊಂಡು ಪತಿಯನ್ನು ಕೊಂದಿದ್ದ ಪತ್ನಿಯನ್ನು ಅಲವರ್‌ನ ಖೇರಲಿಯಲ್ಲಿ ಬಂಧಿಸಿದ್ದಾರೆ.

ಟೆಂಟ್‌ ಉದ್ಯಮ ನಡೆಸುತ್ತಿದ್ದ ವೀರು ಜಾಟವ್‌ ಕೊಲೆಯಾದ ವ್ಯಕ್ತಿ. ಈತನ ಪತ್ನಿ ಅನಿತಾ, ತನ್ನ ಪ್ರಿಯಕರ ಕಾಶಿರಾಮ್‌ ಪ್ರಜಾಪತ್‌ ಸೇರಿದಂತೆ ಇತರ ನಾಲ್ವರ ಸಹಾಯದಿಂದ ಜೂನ್‌ 7ರ ರಾತ್ರಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ADVERTISEMENT

‘ನನ್ನ ತಾಯಿಯು ಪ್ರಿಯಕರ ಸೇರಿದಂತೆ ಇತರ ನಾಲ್ವರ ಸಹಾಯದಿಂದ ತಂದೆಯ ಕೊಲೆ ಮಾಡಿದ್ದಾರೆ’ ಎಂದು ಬಾಲಕ ತಿಳಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.