ಮಧ್ಯಪ್ರದೇಶ: ಫೋನ್ ಮೂಲಕ ಹುಡುಗನ ಜೊತೆ ಮಾತನಾಡುತ್ತಿದ್ದಳು ಎಂಬ ಕಾರಣಕ್ಕಾಗಿ ಕುಟುಂಬದವರೇ ಬಾಲಕಿಯ ಜಡೆಯನ್ನು ನಡು ರಸ್ತೆಯಲ್ಲೇ ಕತ್ತರಿಸಿರುವ ಘಟನೆ ನಡೆದಿದೆ.
ಮಧ್ಯಪ್ರದೇಶದ ಅಲಿರಾಜ್ಪುರ ಪ್ರದೇಶದ ಸೊಂಡ್ವಾ ಎಂಬಲ್ಲಿ ಈ ಘಟನೆ ನಡೆದಿದೆ. ಬಾಲಕಿ ಅಪ್ರಾಪ್ತಳಾಗಿದ್ದು, ಆಕೆ ತನ್ನ ಪರಿಚಯದ ಹುಡುಗನೊಬ್ಬನ ಜೊತೆ ಫೋನ್ನಲ್ಲಿ ಮಾತನಾಡಿದಳು ಎನ್ನಲಾಗಿದೆ.
ಇದರಿಂದಾಗಿ ಆಕೆಯ ಕುಟುಂಬದ ನಾಲ್ಕು ಮಂದಿ ಸೇರಿ ಆಕೆಯ ಜಡೆಯನ್ನೇ ನಡು ರಸ್ತೆಯಲ್ಲಿ ಕತ್ತರಿಸಿ ಹಾಕಿದ್ದಾರೆ. ಈ ಘಟನೆಯನ್ನು ಊರ ಜನರೆಲ್ಲಾ ನೋಡುತ್ತಿದ್ದರೂ ಯಾರೊಬ್ಬರೂ ತಡೆಯಲು ಮುಂದಾಗಲಿಲ್ಲ.
ಈ ಘಟನೆಯನ್ನು ಮೊಬೈಲ್ನಲ್ಲಿ ಚಿತ್ರಿಸಿದ ವ್ಯಕ್ತಿಯೊಬ್ಬ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ. ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಘಟನೆ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿರುವುದಾಗಿ ಎಸ್ಡಿಪಿ ಧೀರಜ್ ಬಬ್ಬರ್ ಎಎನ್ ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.