ADVERTISEMENT

ಆಧಾರ್‌ ದೃಢೀಕರಿಸಿದ ಸಿಮ್‌ ಸ್ಥಗಿತ ಇಲ್ಲ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 19:38 IST
Last Updated 19 ಅಕ್ಟೋಬರ್ 2018, 19:38 IST

ನವದೆಹಲಿ: ಆಧಾರ್‌ ಸಂಖ್ಯೆಯ ಮೂಲಕ ಗುರುತು ದೃಢೀಕರಿಸಿ ಪಡೆದುಕೊಂಡ ಮೊಬೈಲ್‌ ಸಿಮ್‌ಗಳು ಸ್ಥಗಿತಗೊಳ್ಳುವ ಆತಂಕ ಬೇಡ ಎಂದು ದೂರಸಂಪರ್ಕ ಸಚಿವಾಲಯ ಮತ್ತು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ (ಯುಐಡಿಎಐ) ತಿಳಿಸಿವೆ.

ಆಧಾರ್‌ ಮೂಲಕ ದೃಢೀಕರಣ ಮಾಡಿಕೊಂಡವರು ಮರು ದೃಢೀಕರಣ ಮಾಡಬೇಕಿಲ್ಲ ಮತ್ತು ಪರ್ಯಾಯ ವಿಳಾಸ ದಾಖಲೆಗಳನ್ನು ನೀಡುವ ಅಗತ್ಯ ಇಲ್ಲ ಎಂದು ಯುಐಡಿಎಐ ಹೇಳಿದೆ.

ಮೊಬೈಲ್‌ ಸಂಖ್ಯೆಗೆ ಆಧಾರ್‌ ಜೋಡಿಸಿದವರಿಗೆ ಅದನ್ನು ರದ್ದುಪಡಿಸಬೇಕು ಎಂದಿದ್ದರೆ ಬೇರೆ ದಾಖಲೆಗಳನ್ನು ಕೊಡಬಹುದು ಎಂದು ಸರ್ಕಾರ ಗುರುವಾರ ಹೇಳಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.