ADVERTISEMENT

ಉತ್ತರ ಪ್ರದೇಶ ಚುನಾವಣೆ ಮೇಲೆ ಎಎಪಿ ಕಣ್ಣು

ಪಿಟಿಐ
Published 23 ಫೆಬ್ರುವರಿ 2020, 19:39 IST
Last Updated 23 ಫೆಬ್ರುವರಿ 2020, 19:39 IST

ಲಖನೌ: ದೆಹಲಿ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಎಎಪಿ, ಉತ್ತರ ಪ್ರದೇಶದಲ್ಲಿ 2022ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯತ್ತ ದೃಷ್ಟಿ ಹರಿಸಿದೆ.

‘ದೆಹಲಿ ಅಭಿವೃದ್ಧಿ ಮಾದರಿಯನ್ನು ಮುಂದಿಟ್ಟುಕೊಂಡು ಪಕ್ಷವು ಉತ್ತರ ಪ್ರದೇಶದ ಜನರಲ್ಲಿ ಮತಯಾಚನೆ ಮಾಡಲಿದೆ. ‘ದೆಹಲಿ ಮಾದರಿ’ಗೆ ಹೋಲಿಸಿದರೆ ‘ಗುಜರಾತ್‌ ಮಾದರಿ’ ಏನೂ ಅಲ್ಲ’ ಎಂದು ಎಎಪಿ ವಕ್ತಾರ ಸಂಜಯ್ ಸಿಂಗ್‌ ಹೇಳಿದ್ದಾರೆ. ‘ಕಾರ್ಯಕರ್ತರು ಜನರ ಬಳಿಗೆ ತೆರಳಿ ಪಕ್ಷದ ಅಭಿವೃದ್ಧಿ ಕಾರ್ಯಸೂಚಿ ಮತ್ತು ಯೋಜನೆಗಳ ಬಗ್ಗೆ ಅರಿವು ಮೂಡಿಸಲಿದ್ದಾರೆ’ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT