ADVERTISEMENT

ರೈಲ್ವೆ ಇಲಾಖೆಯಲ್ಲಿ 2.74 ಲಕ್ಷ ಹುದ್ದೆ ಖಾಲಿ

ಪಿಟಿಐ
Published 28 ಜೂನ್ 2023, 16:42 IST
Last Updated 28 ಜೂನ್ 2023, 16:42 IST
.
.   

ಪಿಟಿಐ

ನವದೆಹಲಿ: ‘ರೈಲ್ವೆ ಇಲಾಖೆಯಲ್ಲಿ 2,74,580 ಹುದ್ದೆಗಳು ಖಾಲಿಯಿದ್ದು, ಅವುಗಳಲ್ಲಿ ಸುರಕ್ಷತಾ ವಿಭಾಗಕ್ಕೆ ಸಂಬಂಧಿಸಿದಂತೆ 1,77,924 ಉದ್ಯೋಗಗಳು ಖಾಲಿ ಇವೆ’ ಎಂದು ಆರ್‌ಟಿಐ ಅರ್ಜಿಯೊಂದಕ್ಕೆ ನೀಡಿದ ಪ್ರತ್ಯುತ್ತರದಲ್ಲಿ ರೈಲ್ವೆ ಸಚಿವಾಲಯ ತಿಳಿಸಿದೆ.

ಮಧ್ಯಪ್ರದೇಶ ಮೂಲದ ಆರ್‌ಟಿಐ ಕಾರ್ಯಕರ್ತ ಚಂದ್ರ ಶೇಖರ್‌ ಗೌರ್‌ ಅವರು ಸಲ್ಲಿಸಿದ್ದ ಅರ್ಜಿಗೆ ರೈಲ್ವೆ ಸಚಿವಾಲಯ ಈ ಪ್ರತ್ಯುತ್ತರ ನೀಡಿದೆ.

ADVERTISEMENT

‘01.06.2023ರಂತೆ ಭಾರತೀಯ ರೈಲ್ವೆಯಲ್ಲಿ ಗ್ರೂಪ್-ಸಿ (ಹಂತ-1 ಸೇರಿದಂತೆ) ಖಾಲಿ ಇರುವ ಒಟ್ಟು ನಾನ್-ಗೆಜೆಟೆಡ್ ಹುದ್ದೆಗಳ (ತಾತ್ಕಾಲಿಕ) ಸಂಖ್ಯೆ 2,74,580. ಸುರಕ್ಷತಾ ವಿಭಾಗದಲ್ಲಿ (ಗ್ರುಪ್‌ ಸಿ, ಹಂತ–1) ಮಂಜೂರಾದ, ಕೆಲಸ ನಿರ್ವಹಿಸುತ್ತಿರುವ ಮತ್ತು ಖಾಲಿ ಹುದ್ದೆಗಳ (ತಾತ್ಕಾಲಿಕ) ಸಂಖ್ಯೆ ಕ್ರಮವಾಗಿ 9,82,037, 8,04,113 ಮತ್ತು 1,77,924 ಆಗಿದೆ’ ಎಂದು ಸಚಿವಾಲಯ ಉತ್ತರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.