ADVERTISEMENT

ಆಸಿಡ್‌ ದಾಳಿ ಅನಾಗರಿಕ, ನಿರ್ದಯ ಅಪರಾಧ: ಸುಪ್ರೀಂ

ಪಿಟಿಐ
Published 18 ಮಾರ್ಚ್ 2019, 18:33 IST
Last Updated 18 ಮಾರ್ಚ್ 2019, 18:33 IST

ನವದೆಹಲಿ: ‘ಆಸಿಡ್‌ ದಾಳಿ ಅನಾಗರಿಕ ಮತ್ತು ನಿರ್ದಯ ಅಪರಾಧ. ಇದಕ್ಕೆ ಕ್ಷಮೆ ಎಂಬುದೇ ಇಲ್ಲ’ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

2004ರಲ್ಲಿ ಹಿಮಾಚಲ ಪ್ರದೇಶದಲ್ಲಿ 19 ವರ್ಷದ ಯುವತಿ ಮೇಲೆ ನಡೆದಆಸಿಡ್‌ ದಾಳಿ ಪ್ರಕರಣದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಸಂತ್ರಸ್ತೆಗೆ ಹೆಚ್ಚುವರಿಯಾಗಿ ₹1.5 ಲಕ್ಷ ಪರಿಹಾರ ನೀಡುವಂತೆ ಇಬ್ಬರು ಅಪರಾಧಿಗಳುಸೂಚಿಸಿದೆ.

ಸಂತ್ರಸ್ತೆಗೆಹಿಮಾಚಲ ಪ್ರದೇಶ ಸರ್ಕಾರ, ಸಂತ್ರಸ್ತರ ಪರಿಹಾರ ನಿಧಿ ಅಡಿಯಲ್ಲಿ ಹಣ ನೀಡುವಂತೆ ಕೋರ್ಟ್‌ ಆದೇಶಿಸಿದೆ.

ADVERTISEMENT

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್‌ ಮತ್ತು ಅಜಯ್ ರಸ್ತೋಗಿ ಅವರನ್ನೊಳಗೊಂಡ ವಿಭಾಗೀಯ ಪೀಠ, ‘ಆಸಿಡ್‌ ದಾಳಿಗೆ ಒಳಗಾದವರುಭಾವನಾತ್ಮಕವಾಗಿ ಯಾತನೆ ಅನುಭವಿಸುತ್ತಿರುತ್ತಾರೆ. ಅಪರಾಧಿಗಳಿಗೆ ಶಿಕ್ಷೆ ನೀಡುವ ಮೂಲಕ ಅಥವಾ ಪರಿಹಾರ ಹಣ ನೀಡುವ ಮೂಲಕ ಆ ಯಾತನೆಗೆ ಪರಿಹಾರ ನೀಡಲಾಗುವುದಿಲ್ಲ’ ಎಂದು ತಿಳಿಸಿದೆ.

ಈ ಹಿಂದೆಅಪರಾಧಿಗಳಿಗೆ ವಿಚಾರಣಾಧೀನ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ಮತ್ತು ₹5,000 ದಂಡ ವಿಧಿಸಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಅಪರಾಧಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಹೈಕೋರ್ಟ್‌ ಶಿಕ್ಷೆಯ ಪ್ರಮಾಣವನ್ನು ಐದು ವರ್ಷಕ್ಕೆ ಇಳಿಸಿ, ₹25 ಸಾವಿರ ದಂಡ ವಿಧಿಸಿತು. ಈ ತೀರ್ಪು ಪ್ರಶ್ನಿಸಿ ಸರ್ಕಾರ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ಇಬ್ಬರು ಅಪರಾಧಿಗಳು ಕಳೆದ ಡಿಸೆಂಬರ್‌ನಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.