ADVERTISEMENT

Covid-19 India Update: ಕೋವಿಡ್‌ ಸಕ್ರಿಯ ಪ್ರಕರಣ 1.67 ಲಕ್ಷಕ್ಕೆ ಇಳಿಕೆ

ಪಿಟಿಐ
Published 25 ಅಕ್ಟೋಬರ್ 2021, 5:54 IST
Last Updated 25 ಅಕ್ಟೋಬರ್ 2021, 5:54 IST
,
,   

ನವದೆಹಲಿ: ದೇಶದಲ್ಲಿ ಹೊಸದಾಗಿ14,306 ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,67,695 ಕ್ಕೆ ಕುಸಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಒಟ್ಟು ಸೋಂಕಿತರ ಸಂಖ್ಯೆ3,41,89,774ಕ್ಕೆ ಹೆಚ್ಚಳವಾಗಿದೆ. ಹೊಸದಾಗಿ 443 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಪ್ರಮಾಣ 4,54,712ಕ್ಕೆ ಏರಿಕೆಯಾಗಿದೆ.

ಸತತ 31 ದಿನಗಳಿಂದ ಕೋವಿಡ್‌ ಹೊಸ ಪ್ರಕರಣಗಳ ಸಂಖ್ಯೆ 30 ಸಾವಿರಕ್ಕಿಂತ ಕಡಿಮೆಯೇ ಇದೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕಿತರಿಗೆ ಹೋಲಿಸಿದರೆ ಶೇ0.49ರಷ್ಟಿದೆ. 2020ರ ಮಾರ್ಚ್‌ನಿಂದೀಚೆಗೆ ಇದು ಕನಿಷ್ಠ ಪ್ರಮಾಣವಾಗಿದೆ.

ADVERTISEMENT

ದೇಶದಲ್ಲಿ ಇದುವರೆಗೆ102.27 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.