ADVERTISEMENT

Covid India Update| ಹೊಸ ಪ್ರಕರಣಗಳಲ್ಲಿ ಭಾರಿ ಇಳಿಕೆ: ಪಾಸಿಟಿವಿಟಿ ದರ ಶೇ 0.47

ಪಿಟಿಐ
Published 10 ಮೇ 2022, 5:12 IST
Last Updated 10 ಮೇ 2022, 5:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: 24 ಗಂಟೆಗಳ ಅವಧಿಯಲ್ಲಿ ಭಾರತ 2,288 ಹೊಸ ಕೋವಿಡ್‌ ಪ್ರಕರಣಗಳನ್ನು ಕಂಡಿದೆ. ಇದರೊಂದಿಗೆ ದೇಶದ ಒಟ್ಟಾರೆ ಸೋಂಕಿತರ ಸಂಖ್ಯೆ 4,31,07,689ಕ್ಕೆ ಏರಿಕೆಯಾಗಿದೆಯಾದರೂ, ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿದಿದೆ. ದೇಶದ‌ ಈಗಿನ ಸಕ್ರಿಯ ಪ್ರಕರಣಗಳ ಸಂಖ್ಯೆ 19,637 ಆಗಿದೆ.

ಈ ಒಂದು ದಿನದ ಇದೇ ಅವಧಿಯಲ್ಲಿ 10 ಮಂದಿ ಕೋವಿಡ್‌ ಕಾರಣಕ್ಕೆ ಮೃತಪಟ್ಟಿದ್ದಾರೆ. ಇದರಲ್ಲಿ 6 ಸಾವು ಕೇರಳದಲ್ಲಿ , ಮೂರು ದೆಹಲಿಯಲ್ಲಿ, ಒಂದು ಪ್ರಕರಣ ಕರ್ನಾಟಕದಲ್ಲಿ ವರದಿಯಾಗಿದೆ. ಒಟ್ಟಾರೆ ಸಾವಿನ ಸಂಖ್ಯೆ 5,24,103ಕ್ಕೆ ತಲುಪಿದೆ.

ಪಾಸಿಟಿವಿಟಿ ದರ 0.47ಕ್ಕೆ ಇಳಿದಿದೆ. ಕಳೆದ ವಾರ ದೇಶದಲ್ಲಿ ಕೋವಿಡ್‌ ಪ್ರಕರಣಗಳಲ್ಲಿ ನಿರಂತರ ಏರಿಕೆ ದಾಖಲಾಗಿತ್ತು. ಆದರೆ, ಮೂರು ದಿನಗಳಿಂದ ಸೋಂಕು ಇಳಿಕೆ ಹಾದಿಯಲ್ಲಿದೆ.

ADVERTISEMENT

ದೇಶದಲ್ಲಿ ಈ ವರೆಗೆ 190.50 ಕೋಟಿ ಕೋವಿಡ್‌ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.