ADVERTISEMENT

Covid 19 India Update| ದೇಶದಲ್ಲಿ ಕೋವಿಡ್‌ ಪ್ರಕರಣಗಳ ಅಲ್ಪ ಏರಿಕೆ: 733 ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಅಕ್ಟೋಬರ್ 2021, 4:53 IST
Last Updated 28 ಅಕ್ಟೋಬರ್ 2021, 4:53 IST
   

ದೆಹಲಿ: ಬ್ರಿಟನ್‌, ರಷ್ಯಾ ಸೇರಿದಂತೆ ಜಗತ್ತಿನ ಹಲವು ಕಡೆಗಳಲ್ಲಿ ಕೋವಿಡ್‌ನ ಮೂರನೇ ಅಲೆ ಮುನ್ಸೂಚನೆ ದೊರೆತಿರುವ ನಡುವೆಯೇ ಭಾರತದಲ್ಲಿ ಗುರುವಾರ ಸೋಂಕು ಪ್ರಕರಣಗಳಲ್ಲಿ ದಿಢೀರ್‌ ಏರಿಕೆ ಕಂಡಿದೆ.

ಬುಧವಾರ 13,451 ಪ್ರಕರಣಗಳು, 585 ಸಾವುಗಳು ಸಂಭವಿಸಿದ್ದವು. ಆದರೆ, ಒಂದೇ ದಿನದ ಅಂತರದಲ್ಲಿ ಗುರುವಾರ 16,156 ಹೊಸ ಪ್ರಕರಣಗಳು ವರದಿ ಯಾಗಿವೆ. 733 ಸಾವುಗಳು ಸಂಭವಿಸಿವೆ.

ಇಂದು ವರದಿಯಾದ ಪ್ರಕರಣಗಳು ಸೇರಿ ಭಾರತದ ಒಟ್ಟಾರೆ ಸೋಂಕಿತರ ಸಂಖ್ಯೆ 3,42,31,809ಕ್ಕೆ ಏರಿದೆ. ಇನ್ನು ಸಾವಿನ ಸಂಖ್ಯೆ 4,56,386ಕ್ಕೆ ತಲುಪಿದೆ.

ADVERTISEMENT

ಸದ್ಯ ದೇಶದಲ್ಲಿ 1,60,989 ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.