ADVERTISEMENT

ಮಾದಕವಸ್ತು ವ್ಯಸನ ವಿನಾಶಕಾರಿ: ಪ್ರಧಾನಿ ನರೇಂದ್ರ ಮೋದಿ

ಪಿಟಿಐ
Published 26 ಜೂನ್ 2021, 10:34 IST
Last Updated 26 ಜೂನ್ 2021, 10:34 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ‘ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿ ಬಾಳು ಕತ್ತಲಾಗುತ್ತದೆ. ಅದು ವಿನಾಶಕಾರಿಯೂ ಹೌದು’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.

ಅಂತರರಾಷ್ಟ್ರೀಯ ಮಾದಕ ವಸ್ತುವ್ಯಸನ ಹಾಗೂ ಕಳ್ಳಸಾಗಣೆ ವಿರೋಧಿ ದಿನದ ಅಂಗವಾಗಿ ಅವರು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

‘ವಿನಾಶಕ್ಕೆ ಕಾರಣವಾಗುವಂಥ ಮಾದಕ ವಸ್ತುಗಳಿಂದ ಭಾರತವನ್ನು ಮುಕ್ತ ಮಾಡುವುದು ಅಗತ್ಯ. ಮಾದಕ ವಸ್ತುಗಳ ವ್ಯಸನದ ವಿರುದ್ಧ ಬೇರು ಮಟ್ಟದಲ್ಲಿ ಹೋರಾಡುತ್ತಿರುವವರ ಕಾರ್ಯ ಶ್ಲಾಘನೀಯ’ ಎಂದು ಹೇಳಿದ್ದಾರೆ.

ADVERTISEMENT

‘ಮಾದಕವಸ್ತುಗಳ ವ್ಯಸನವನ್ನು ಉದಾಸೀನ ಮಾಡುವ ಹಾಗಿಲ್ಲ. ಅದು ಅನುಕರಿಸಬೇಕಾದ ಮಾದರಿಯೂ ಅಲ್ಲ’ ಎಂದಿದ್ದಾರೆ.

ಮಾದಕವಸ್ತುಗಳ ವ್ಯಸನದಿಂದ ಮುಕ್ತವಾಗುವ ಕುರಿತು ಈ ಹಿಂದೆ ‘ಮನ್‌ ಕಿ ಬಾತ್‌‘ನಲ್ಲಿ ಪ್ರಸ್ತಾಪಿಸಿದ್ದ ತಮ್ಮ ವಿಚಾರಗಳನ್ನು ಅವರು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.