ದೇಣಿಗೆ
2022–23ರ ಅವಧಿಯಲ್ಲಿ ದೇಶದ ಪ್ರಾದೇಶಿಕ ಪಕ್ಷಗಳ ಪೈಕಿ ಬಿಆರ್‌ಎಸ್ ಪಕ್ಷ ಅತಿ ಹೆಚ್ಚು ದೇಣಿಗೆಯನ್ನು ಪಡೆದುಕೊಂಡಿದೆ. ಪ್ರಾದೇಶಿಕ ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ 2022–23ರ ಅವಧಿಯ ಮಾಹಿತಿಯನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವಿಶ್ಲೇಷಿಸಿ ಶುಕ್ರವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಮಾಹಿತಿ ಇದೆ.
ಪಟ್ಟಿಯ ಮೊದಲ ನಾಲ್ಕು ಸ್ಥಾನಗಳಲ್ಲಿ ದಕ್ಷಿಣ ಭಾರತದ ಪ್ರಾದೇಶಿಕ ಪಕ್ಷಗಳೇ ಇವೆ. ಆಯೋಗವು ನಿಗದಿ ಮಾಡಿದ್ದ ದಿನಾಂಕದ ಒಳಗೆ ದೇಶದ ಒಟ್ಟು 57 ಪ್ರಾದೇಶಿಕ ಪಕ್ಷಗಳ ಪೈಕಿ 35 ಪಕ್ಷಗಳು ಮಾತ್ರವೇ ಮಾಹಿತಿ ನೀಡಿವೆ. ₹20 ಸಾವಿರಕ್ಕಿಂತ ಹೆಚ್ಚಿನ ಪ್ರಮಾಣದ ದೇಣಿಗೆಯನ್ನು ಯಾವುದೇ ಪಕ್ಷವು ಪಡೆದುಕೊಂಡರೆ, ಈ ಮಾಹಿತಿಯನ್ನು ಆಯೋಗಕ್ಕೆ ನೀಡಬೇಕು ಎಂದು ಜನಪ್ರತಿನಿಧಿಗಳ ಕಾಯ್ದೆಯಲ್ಲಿ ಹೇಳಲಾಗಿದೆ. ಡಿಎಂಕೆ, ಎಂಎನ್‌ಎಸ್, ಎಐಎಂಐಎಂ ಹಾಗೂ ಎಡಿ (ಸೋನಿಲಾಲ್) ಪಕ್ಷಗಳು ತಮಗೆ ಬಂದ ₹20 ಸಾವಿರಕ್ಕಿಂತ ಕಡಿಮೆ ಪ್ರಮಾಣದ ದೇಣಿಗೆಯ ವಿವರನ್ನೂ ಆಯೋಗಕ್ಕೆ ನೀಡಿವೆ.
ಆಧಾರ: ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.