ADVERTISEMENT

ಅಫ್ಗನ್‌ ಮುಸ್ಲಿಮರಿಗೆ ಭಾರತದಲ್ಲಿ ಆಶ್ರಯ ಕಲ್ಪಿಸಬಾರದು: ಪ್ರವೀಣ್‌ ತೊಗಾಡಿಯಾ

ಪಿಟಿಐ
Published 27 ಆಗಸ್ಟ್ 2021, 4:02 IST
Last Updated 27 ಆಗಸ್ಟ್ 2021, 4:02 IST
ಅಂತರರಾಷ್ಟ್ರೀಯ ಹಿಂದೂ ಪರಿಷತ್‌ನ ಮುಖ್ಯಸ್ಥ ಪ್ರವೀಣ್‌ ತೊಗಾಡಿಯಾ
ಅಂತರರಾಷ್ಟ್ರೀಯ ಹಿಂದೂ ಪರಿಷತ್‌ನ ಮುಖ್ಯಸ್ಥ ಪ್ರವೀಣ್‌ ತೊಗಾಡಿಯಾ   

ನಾಗ್ಪುರ: ಅಫ್ಗಾನಿಸ್ತಾನದಿಂದ ಬರುವ ಮುಸ್ಲಿಂ ಪ್ರಜೆಗಳಿಗೆ ಭಾರತದಲ್ಲಿ ಆಶ್ರಯ ಕಲ್ಪಿಸಬಾರದು ಎಂದು ಅಂತರರಾಷ್ಟ್ರೀಯ ಹಿಂದೂ ಪರಿಷತ್‌ನ ಮುಖ್ಯಸ್ಥ ಪ್ರವೀಣ್‌ ತೊಗಾಡಿಯಾ ಅವರು ಕೇಂದ್ರ ಸರ್ಕಾರವನ್ನು ಗುರುವಾರ ಒತ್ತಾಯಿಸಿದ್ದಾರೆ. ಆದರೆ ಅಲ್ಲಿಂದ ಬರುವ ಹಿಂದೂ ಮತ್ತು ಸಿಖ್‌ ನಿರಾಶ್ರಿತರಿಗೆ ಭಾರತವು ಗಡಿಯನ್ನು ತೆರೆದಿರಿಸಬೇಕು ಎಂದು ಹೇಳಿದ್ದಾರೆ.

ನಾಗ್ಪುರ–ವಾರ್ಧಾ ಪ್ರದೇಶದ ಮೂರು ದಿನಗಳ ಭೇಟಿಗಾಗಿ ಇಲ್ಲಿಯ ವಿಮಾನ ನಿಲ್ದಾಣಕ್ಕೆ ಬಂದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಭಾರತವು ತಾಲಿಬಾನ್ ಉದ್ದೇಶದ ಕೇಂದ್ರಬಿಂದುವಾಗಿರುವುದರಿಂದ ದೇಶವು ಬಹಳ ದೊಡ್ಡ ಅಪಾಯ ಎದುರಿಸುತ್ತಿದೆ. ಆದ್ದರಿಂದ ದೇಶವು ತಾಲಿಬಾನೀಕರಣ ಆಗುವುದನ್ನು ತಡೆಯಬೇಕಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.