ADVERTISEMENT

ಅರುಣಾಚಲ: ಆಫ್ರಿಕಾದ ಹಂದಿ ಜ್ವರ ಪತ್ತೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 14:11 IST
Last Updated 2 ಜುಲೈ 2025, 14:11 IST
.
.   

ಇಟಾನಗರ (ಪಿಟಿಐ): ಅರುಣಾಚಲ ಪ್ರದೇಶದ ಲೋಂಗ್ಡಿಂಗ್‌ ಜಿಲ್ಲೆಯ ಲುಯಾಕ್‌ಸಿಮ್‌ ಗ್ರಾಮದಲ್ಲಿ ಆಫ್ರಿಕಾದ ಹಂದಿ ಜ್ವರ (ಎಎಸ್‌ಎಫ್‌) ಪ್ರಕರಣ ಬುಧವಾರ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಪಶು ವೈದ್ಯಕೀಯ ಇಲಾಖೆಯು, ಎಎಸ್‌ಎಫ್‌ ವ್ಯಾಪಿಸುವುದನ್ನು ತಡೆಯಲು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಜಿಲ್ಲಾ ಪಶು ವೈದ್ಯಕೀಯ ಅಧಿಕಾರಿ ಡಾ.ಒಜುಲಿ ಮೊಯೋಂಗ್‌ ಅವರು, ಪ್ರಮಾಣೀಕೃತ ಕಾರ್ಯಾಚರಣೆ ವಿಧಾನಕ್ಕೆ (ಎಸ್‌ಒಪಿ) ಅನುಗುಣವಾಗಿ ಗ್ರಾಮದಿಂದ ಒಂದು ಕಿಲೋ ಮೀಟರ್‌  ಪ್ರದೇಶವನ್ನು ‘ಸೋಂಕಿತ ವಲಯ’ ಎಂದು ಘೋಷಿಸಿದ್ದಾರೆ. 10 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ‘ಕಣ್ಗಾವಲು ವಲಯ’ ಎಂದು ಘೋಷಿಸಿದ್ದಾರೆ. 

ADVERTISEMENT

ಇಲ್ಲಿ ಹಂದಿಗಳ ಓಡಾಟ ಮತ್ತು ಹಂದಿ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.