
ಪಿಟಿಐ
ಪತ್ತನಂತಿಟ್ಟ: ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಆಫ್ರಿಕನ್ ಹಂದಿ ಜ್ವರ ಪ್ರಕರಣ ಪತ್ತೆಯಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಸೀತಾತೋಡು ಪಂಚಾಯತ್ ವ್ಯಾಪ್ತಿಯ ಹಂದಿ ಸಾಕಣೆ ಕೇಂದ್ರದಲ್ಲಿನ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ಇರುವುದು ಭೋಪಾಲ್‌ನ ರಾಷ್ಟ್ರೀಯ ಪ್ರಾಣಿ ರೋಗಗಳ ಪತ್ತೆ ಕೇಂದ್ರದ ಪ್ರಯೋಗಾಲಯಕ್ಕೆ (ಎನ್‌ಐಎಚ್‌ಎಸ್‌ಎಡಿ) ಕಳುಹಿಸಿದ್ದ ಮಾದರಿಗಳಿಂದ ದೃಢಪಟ್ಟಿದೆ ಎಂದೂ ವಿವರಿಸಿದ್ದಾರೆ.
ರೋಗವು ಇತರ ಹಂದಿಸಾಕಣೆ ಕೇಂದ್ರಗಳಿಗೆ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.