ADVERTISEMENT

ಜಗಮೋಹನ್‌ ರೆಡ್ಡಿ ಪ್ರಕರಣ: ನಿರ್ಧಾರ ಮರುಪರಿಶೀಲಿಸದಿರಲು ವೇಣುಗೋಪಾಲ್‌ ತೀರ್ಮಾನ

ಪಿಟಿಐ
Published 8 ನವೆಂಬರ್ 2020, 15:46 IST
Last Updated 8 ನವೆಂಬರ್ 2020, 15:46 IST
ವೈ.ಎಸ್‌. ಜಗಮೋಹನ್‌ ರೆಡ್ಡಿ
ವೈ.ಎಸ್‌. ಜಗಮೋಹನ್‌ ರೆಡ್ಡಿ   

ನವದೆಹಲಿ: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌. ಜಗಮೋಹನ್‌ ರೆಡ್ಡಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ನಿರಾಕರಿಸಿದ್ದ ಅಟಾರ್ನಿ ಜನರಲ್‌ ಕೆ. ಕೆ. ವೇಣುಗೋಪಾಲ್‌, ತಮ್ಮ ನಿರ್ಧಾರವನ್ನು ಮರುಪರಿಶೀಲಿಸದಿರಲೂ ತೀರ್ಮಾನಿಸಿದ್ದಾರೆ.

ನ್ಯಾಯಮೂರ್ತಿಗಳ ವಿರುದ್ಧ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಜಗಮೋಹನ್‌ ಮತ್ತು ಅವರ ಪ್ರಧಾನ ಸಲಹೆಗಾರನ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಒಪ್ಪಿಗೆ ನೀಡುವಂತೆ ಬಿಜೆಪಿ ಮುಖಂಡ ಹಾಗೂ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದರು. ಈ ಅರ್ಜಿಯನ್ನುಈ ತಿಂಗಳ 2ರಂದು ವೇಣುಗೋಪಾಲ್‌ ತಿರಸ್ಕರಿಸಿದ್ದರು.

ನ್ಯಾಯಾಂಗದ ನಿಂದನೆಯು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ, ಮುಖ್ಯಮಂತ್ರಿ ಜಗಮೋಹನ್‌ ಹಾಗೂ ಅವರ ಪ್ರಧಾನ ಸಲಹೆಗಾರ ಅಜಯ್‌ ಕಲ್ಲಂ ಅವರ ನಡುವಣ ವಿಚಾರವಾಗಿದೆ ಎಂದು ವೇಣುಗೋಪಾಲ್‌ ಅವರು ಉಪಾಧ್ಯಾಯ ಅವರ ಪತ್ರಕ್ಕೆ ಉತ್ತರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.