ADVERTISEMENT

ಔಷಧದ ನೆರವಿಲ್ಲದೇ ಹರ್ಡ್‌ ಇಮ್ಯುನಿಟಿ ಹೆಚ್ಚಿಸುವುದು ಅಪಾಯ: ಅಶ್ವಿನಿ ಕುಮಾರ್

ಕೇಂದ್ರ ಆರೋಗ್ಯ ಇಲಾಖೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ

ಪಿಟಿಐ
Published 20 ಸೆಪ್ಟೆಂಬರ್ 2020, 9:29 IST
Last Updated 20 ಸೆಪ್ಟೆಂಬರ್ 2020, 9:29 IST
ಅಶ್ವಿನಿ ಕುಮಾರ್ ಚೌಬೆ
ಅಶ್ವಿನಿ ಕುಮಾರ್ ಚೌಬೆ   

ನವದೆಹಲಿ: ಔಷಧೋಪಚಾರಗಳ ನೆರವಿಲ್ಲದೇಕೋವಿಡ್‌ 19 ವಿರುದ್ಧದ ಹೋರಾಡಲು ಸಮುದಾಯದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ (ಹರ್ಡ್ ಇಮ್ಯುನಿಟಿ) ಪ್ರಯತ್ನದಿಂದಸಮುದಾಯದಲ್ಲಿ ರೋಗದ ಪ್ರಮಾಣ ಉಲ್ಬಣಗೊಂಡು, ಸಾವಿನ ಪ್ರಮಾಣವೂ ಹೆಚ್ಚಾಗುವ ಅಪಾಯವಿದೆ ಎಂದು ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.

‘ಕೋವಿಡ್‌ 19 ಸೋಂಕಿನ ವಿರುದ್ಧ ಹೋರಾಡಲು ರಾಜ್ಯ ಸರ್ಕಾರಗಳು ಸಮುದಾಯದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವಂತಹ ಕ್ರಮಗಳನ್ನು ಅನುಸರಿಸುತ್ತಿವೆಯೇ' ಎಂದು ಕೇಳಿದ ಪ್ರಶ್ನೆಗೆ ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.

‘ಕೋವಿಡ್‌19 ಸೋಂಕಿನ ಆರಂಭಿಕ ಹಂತದಲ್ಲಿ, ಕೆಲವು ದೇಶಗಳು ಸ್ವಾಭಾವಿಕವಾಗಿ ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಪ್ರಕ್ರಿಯೆಗೆ ಅವಕಾಶ ನೀಡಿದ್ದವು. ಅಂಥ ದೇಶಗಳಲ್ಲಿ ಸೋಂಕು ಹರಡುವ ಪ್ರಮಾಣ ಹೆಚ್ಚಾಗಿ ಸಾವಿನ ಸಂಖ್ಯೆಯಲ್ಲೂ ಏರಿಕೆಯಾಯಿತು. ನಂತರ ಈ ವಿಧಾವನ್ನು ಅಲ್ಲಿ ಕೈಬಿಡಲಾಯಿತು‘ ಎಂದು ಚೌಬೆ ತಿಳಿಸಿದ್ದಾರೆ.

ADVERTISEMENT

ಸೋಂಕು ಹರಡುವುದನ್ನು ನಿಯಂತ್ರಿಸುವುದಕ್ಕಾಗಿ ಆರೋಗ್ಯ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಯೋಜನೆಗಳು, ಕಾರ್ಯವಿಧಾನ ಗಳು, ಸಲಹೆಗಳನ್ನು ನೀಡಿದೆ. ಈ ಕ್ರಮಗಳನ್ನು ಅನುಸರಿಸುವುದರಿಂದ ಸೋಂಕು ಹರಡುವುದು ತಪ್ಪುತ್ತದೆ‘ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.