ADVERTISEMENT

ವಾರ್ಷಿಕ 50 ಲಕ್ಷ ಟನ್‌ ಹಸಿರು ಜಲಜನಕ ಉತ್ಪಾದನೆ ಗುರಿ: ಪ್ರಧಾನಿ ನರೇಂದ್ರ ಮೋದಿ

ಪಿಟಿಐ
Published 8 ಜನವರಿ 2025, 15:57 IST
Last Updated 8 ಜನವರಿ 2025, 15:57 IST
<div class="paragraphs"><p>ವಿಶಾಖಪಟ್ಟಣದಲ್ಲಿ ಬುಧವಾರ ರೋಡ್‌ಶೋನಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ ಅವರು ಜನರತ್ತ ಕೈಬೀಸಿದರು. ಎನ್‌.ಚಂದ್ರಬಾಬು ನಾಯ್ಡು ಮತ್ತು ಪವನ್‌ ಕಲ್ಯಾಣ್‌ ಪಾಲ್ಗೊಂಡರು </p></div>

ವಿಶಾಖಪಟ್ಟಣದಲ್ಲಿ ಬುಧವಾರ ರೋಡ್‌ಶೋನಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ ಅವರು ಜನರತ್ತ ಕೈಬೀಸಿದರು. ಎನ್‌.ಚಂದ್ರಬಾಬು ನಾಯ್ಡು ಮತ್ತು ಪವನ್‌ ಕಲ್ಯಾಣ್‌ ಪಾಲ್ಗೊಂಡರು

   

–ಪಿಟಿಐ ಚಿತ್ರ

ವಿಶಾಖಪಟ್ಟಣ: ರಾಷ್ಟ್ರೀಯ ಹಸಿರು ಜಲಜನಕ ಕಾರ್ಯಕ್ರಮದಡಿ (ನ್ಯಾಷನಲ್ ಗ್ರೀನ್ ಹೈಡ್ರೋಜನ್ ಮಿಷನ್‌) 2030ರ ವೇಳೆಗೆ ದೇಶವು ವಾರ್ಷಿಕ 50 ಲಕ್ಷ ಟನ್ ಹಸಿರು ಜಲಜನಕ ಉತ್ಪಾದಿಸುವ ಗುರಿಯನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.

ADVERTISEMENT

₹ 2 ಲಕ್ಷ ಕೋಟಿಗೂ ಅಧಿಕ ಮೊತ್ತದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಮತ್ತು ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ 2023ರಲ್ಲಿ ನ್ಯಾಷನಲ್ ಗ್ರೀನ್ ಹೈಡ್ರೋಜನ್ ಮಿಷನ್‌ಅನ್ನು ಆರಂಭಿಸಲಾಗಿದೆ. ಈ ಯೋಜನೆಯಡಿ ವಾರ್ಷಿಕ 50 ಲಕ್ಷ ಟನ್ ಹಸಿರು ಜಲಜನಕ ಉತ್ಪಾದಿಸುವ ಗುರಿ ಹೊಂದಲಾಗಿದ್ದು, ಮೊದಲ ಹಂತವಾಗಿ ಎರಡು ಗ್ರೀನ್‌ ಹೈಡ್ರೋಜನ್‌ ಹಬ್‌ಗಳನ್ನು ಸ್ಥಾಪಿಸಲಾಗುವುದು. ಅದರಲ್ಲಿ ಒಂದು ವಿಶಾಖಪಟ್ಟಣದಲ್ಲಿ ತಲೆಎತ್ತಲಿದೆ’ ಎಂದರು.

‘ಸ್ವರ್ಣಾಂಧ್ರಪ್ರದೇಶ–2047’ರ ಭಾಗವಾಗಿ ಆಂಧ್ರಪ್ರದೇಶವು 2047ರ ವೇಳೆಗೆ ದೊಡ್ಡ ಆರ್ಥಿಕತೆಯಾಗಿ ಬೆಳೆಯುವ ಗುರಿಯನ್ನು ಹೊಂದಿದೆ. ಅದನ್ನು ಸಾಕಾರಗೊಳಿಸಲು ಕೇಂದ್ರ ಸರ್ಕಾರವು ಜತೆಯಾಗಿ ಕೆಲಸ ಮಾಡಲಿದೆ’ ಎಂದು ಭರವಸೆ ನೀಡಿದರು.

ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಮತ್ತು ಉಪಮುಖ್ಯಮಮಂತ್ರಿ ಪವನ್‌ ಕಲ್ಯಾಣ್‌ ಅವರು ಪಾಲ್ಗೊಂಡರು. ಇದಕ್ಕೂ ಮುನ್ನ ವಿಶಾಖಪಟ್ಟಣಕ್ಕೆ ಬಂದಿಳಿದ ಪ್ರಧಾನಿ ಅವರನ್ನು ಸ್ವಾಗತಿಸಲು ಭರ್ಜರಿ ರೋಡ್‌ ಶೋ ನಡೆಸಲಾಯಿತು. ರಸ್ತೆಯ ಎರಡೂ ಬದಿಗಳಲ್ಲಿ ಸೇರಿದ್ದ ಬಿಜೆಪಿ ಮತ್ತು ಟಿಡಿಪಿಯ ಸಾವಿರಾರು ಕಾರ್ಯಕರ್ತರು, ಪ್ರಧಾನಿ ಅವರಿದ್ದ ವಾಹನದತ್ತ ಹೂಮಳೆಗರೆದರು.

ವಿಶಾಖಪಟ್ಟಣದಲ್ಲಿ ಬುಧವಾರ ರೋಡ್‌ಶೋನಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ ಅವರು ಜನರತ್ತ ಕೈಬೀಸಿದರು. ಎನ್‌.ಚಂದ್ರಬಾಬು ನಾಯ್ಡು ಮತ್ತು ಪವನ್‌ ಕಲ್ಯಾಣ್‌ ಪಾಲ್ಗೊಂಡರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.